ವಿಶ್ವದ ಮೊದಲ ‘ಎಸಿ ಸೇಫ್ಟಿ ಹೆಲ್ಮೆಟ್‘ ಬಿಡುಗಡೆ

ಅಂತಾರಾಷ್ಟ್ರೀಯ ಸುದ್ದಿಗಳು ರಾಷ್ಟೀಯ ಸುದ್ದಿಗಳು

 

  • ತೆಲಂಗಾಣ ಮೂಲದ ಟೆಕ್ ಕಂಪನಿ ‘ಜೆರ್ಶ್‌ ಸೇಫ್ಟಿ‘ ವಿನ್ಯಾಸಗೊಳಿಸಿರುವ ವಿಶ್ವದ ಮೊದಲ ‘ಎಸಿ ಸೇಫ್ಟಿ ಹೆಲ್ಮೆಟ್‘ ಬಿಡುಗಡೆಯಾಗಿದೆ.
  • ಈ ಎಸಿ ಹೆಲ್ಮೆಟ್‌ಗಳು ಹೊರಾಂಗಣ ಕಾರ್ಯಪಡೆ ಮತ್ತು ಕ್ಷೇತ್ರ ಕಾರ್ಯನಿರ್ವಾಹಕರಿಗೆ ಮೀಸಲಾಗಿದೆ .
  • ‘ದುಬೈ ಎಕ್ಸ್‌ಪೊ 2020’ ಇಂಡಿಯಾ ಪೆವಿಲಿಯನ್‌ನಲ್ಲಿ ಎಸಿ ಸೇಫ್ಟಿ ಹೆಲ್ಮೆಟ್‌ ಅನ್ನು ಬಿಡುಗಡೆ ಮಾಡಲಾಗಿದೆ.
  • ದುಬೈ ಮೂಲದ ಎನ್‌ಐಎ ಲಿಮಿಟೆಡ್‌ನಿಂದ ಹೆಲ್ಮೆಟ್ ಅನ್ನು ಯುಎಇ ಮಾರುಕಟ್ಟೆಯಲ್ಲಿ ವಿತರಿಸಲಾಗುವುದು ಎಂದು ಕಂಪನಿಯು ಹೇಳಿದೆ.
  • ‘ಜಾರ್ಶ್-ಎನ್‌ಐಎ ಎಸಿ ಸೇಫ್ಟಿ ಹೆಲ್ಮೆಟ್‌ಗಳು ಹೊರಾಂಗಣ ಕಾರ್ಯಪಡೆಗೆ ಅತ್ಯವಶ್ಯವಾಗಿದೆ. ವಿಶೇಷವಾಗಿ ಬೇಸಿಗೆಯ ದಿನಗಳಲ್ಲಿ ಈ ಹೆಲ್ಮೆಟ್‌ಗಳು ಹೆಚ್ಚು ಸಹಾಯಕ್ಕೆ ಬರಲಿವೆ.
  • ‘ವರ್ಲ್ಡ್ ಎಕ್ಸ್‌ಪೋ 2020‘ರ ಇಂಡಿಯನ್ ಪೆವಿಲಿಯನ್‌ನ ‘ಇಂಡಿಯಾ ಇನೋವೇಷನ್‌ ಹಬ್‘ ಉಪಕ್ರಮದ ಭಾಗವಾಗಿ ಈ ಉತ್ಪನ್ನವನ್ನು ಬಿಡುಗಡೆ ಮಾಡಲಾಗಿದೆ.
  • ಈ ಯೋಜನೆಯು ದುಬೈನಲ್ಲಿರುವ ಭಾರತದ ಕಾನ್ಸುಲ್ ಜನರಲ್ ಡಾ.ಅಮನ್ ಪುರಿ ಅವರ ಮಾರ್ಗದರ್ಶನ ಹಾಗೂ ಭಾರತ ಮೂಲದ ಪ್ರಮುಖ ಹೂಡಿಕೆದಾರರ ಬೆಂಬಲದೊಂದಿಗೆ ಕಾರ್ಯನಿರ್ವಹಿಸುತ್ತಿದೆ.



  • 24 ಡಿಗ್ರಿ ಸೆಲ್ಸಿಯಸ್‌ವರೆಗೆ ತಂಪಾಗಿಸುವಿಕೆಯನ್ನು ಒದಗಿಸಲು ಪೇಟೆಂಟ್ ಪಡೆದ ಘನ-ಸ್ಥಿತಿಯ ಕೂಲಿಂಗ್ ತಂತ್ರಜ್ಞಾನದಲ್ಲಿ ಜಾರ್ಶ್‌–ಎನ್‌ಐಎ ಹೆಲ್ಮೆಟ್ ಕಾರ್ಯನಿರ್ವಹಿಸುತ್ತದೆ.
  • ಹಿರಿಯ ಕಾರ್ಯನಿರ್ವಾಹಕರಿಗಾಗಿ ತಯಾರಿಸಲಾಗಿರುವ ಪ್ರಿಮಿಯಂ ಹೆಲ್ಮಟ್‌ ಮಾದರಿಯು ಎರಡು ಗಂಟೆಗಳ ಬ್ಯಾಟರಿ ಬ್ಯಾಕ್‌ ಅಪ್‌ ಹೊಂದಿದೆ. ನುರಿತ ಉದ್ಯೋಗಿಗಾಗಿ ತಯಾರಿಸಲಾಗಿರುವ ಹೆವಿ-ಡ್ಯೂಟಿ ಮಾದರಿಯಲ್ಲಿ 10 ಗಂಟೆಗಳ ಬ್ಯಾಟರಿ ಬ್ಯಾಕ್‌ ಇದೆ. ಹೆಲ್ಮೆಟ್‌ನಲ್ಲಿರುವ ನಾಲ್ಕು ರಂದ್ರಗಳ ಮೂಲಕ ಏಕರೂಪದ ಕೂಲಿಂಗ್ ಅನುಭವವನ್ನು ಪಡೆಯಬಹುದಾಗಿದೆ. ಇದು ಬಳಕೆದಾರರಿಗೆ ಬೆವರು ಮುಕ್ತ ಮತ್ತು ಆರಾಮದಾಯಕ ವಾತಾವರಣವನ್ನು ಒದಗಿಸಲಿದೆ.

Leave a Reply

Your email address will not be published. Required fields are marked *