ಅಗ್ನಿಪಥ ಯೋಜನೆ ಅಡಿಯಲ್ಲಿ ದೇಶದ ನಿರುದ್ಯೋಗಿಗಳಿಗೆ ಬೃಹತ್ ಉದ್ಯೋಗ ಅವಕಾಶವನ್ನು ನೀಡಲು ಮುಂದಾಗಿದೆ ಕೇಂದ್ರ ಸರ್ಕಾರ. ಈ ಯೋಜನೆ ಕುರಿತ ಪ್ರಶ್ನೆಗಳು, ನೇಮಕಾತಿ ವಿಧಾನ, ಇತರೆ ಮಾಹಿತಿಗಳಿಗೆ ಇಲ್ಲಿ ಉತ್ತರ ನೀಡಲಾಗಿದೆ
ಕೇಂದ್ರ ಸರ್ಕಾರ ಒಂದೂವರೆ ವರ್ಷದಲ್ಲಿ 10 ಲಕ್ಷ ಹುದ್ದೆಗಳನ್ನು ಭರ್ತಿ ಮಾಡುವ ಮಹತ್ವದ ಹೆಜ್ಜೆ ಇಟ್ಟಿದ್ದು, ಇದರ ಪೈಕಿ ದೇಶ ಸೇವೆ ಮಾಡಲು ಬಯಸುವವರಿಗೆ 4 ವರ್ಷ ಸೇವೆ ಮಾಡುವ ಯೋಜನೆ ಎಂದು ‘ಅಗ್ನಿಪಥ’ ಯೋಜನೆಯನ್ನು ಪರಿಚಯಿಸಿದೆ. ಈ ಯೋಜನೆ ಅಡಿಯಲ್ಲಿ 46 ಸಾವಿರ ಅಗ್ನಿವೀರರನ್ನು ನೇಮಕ ಮಾಡಲು ರಕ್ಷಣಾ ಇಲಾಖೆಗೆ ಅನುಮತಿ ನೀಡಿದೆ.
ಕೇಂದ್ರ ಸರ್ಕಾರ 4 ವರ್ಷ ಅವಧಿಗೆ ಯುವಜನರನ್ನು ಸೇನೆಗೆ ಸೇರಿಸಿಕೊಳ್ಳುವ ಹೊಸ ಯೋಜನೆ ‘ಅಗ್ನಿಪಥ’ ಘೋಷಣೆ ಮಾಡಿದೆ . ಕೇಂದ್ರ ಸರ್ಕಾರವು ಈ ಯೋಜನೆ ಮೂಲಕವೇ ಇನ್ನು ಮುಂದೆ ಸೇನೆಗೆ ನೇಮಕ ಪ್ರಕ್ರಿಯೆ ನಡೆಯಲಿದೆ ಎಂದು ಹೇಳಿದೆ. ಅಲ್ಲದೇ ‘ಅಗ್ನಿಪಥ’ದಿಂದ ಹಿಂದೆ ಸರಿಯುವುದಿಲ್ಲ ಎಂದು ಹೇಳಿದೆ. ಈ ಕುರಿತು ರಕ್ಷಣಾ ಸಚಿವಾಲಯವು ಸ್ಪಷ್ಟನೆ ನೀಡಿದೆ.
ಅಗ್ನಿಪಥ ಯೋಜನೆಯ ನೇಮಕ ಪ್ರಕ್ರಿಯೆ ಆರಂಭಿಸಲು ದೇಶದ ರಕ್ಷಣಾ ಪಡೆಯ ಮೂರು ಪಡೆಗಳಾದ ಭೂಸೇನೆ, ವಾಯುಸೇನೆ, ನೌಕಾಸೇನೆ ಸಿದ್ಧತೆ ಮಾಡಿಕೊಂಡಿದ್ದು, ವೇಳಾಪಟ್ಟಿಯನ್ನು ಇದೀಗ ಬಿಡುಗಡೆ ಮಾಡಲಾಗಿದೆ. ಆಗಸ್ಟ್, ಸೆಪ್ಟೆಂಬರ್ ಮತ್ತು ಅಕ್ಟೋಬರ್‌ನಲ್ಲಿ ದೇಶದಾದ್ಯಂತ 83 Rally ನಡೆಯಲಿದ್ದು, 46 ಸಾವಿರ ಅಗ್ನಿವೀರರ ನೇಮಕಾತಿ ನಡೆಯಲಿದೆ.
ಭೂಸೇನೆ ಅಗ್ನಿವೀರರ ನೇಮಕಕ್ಕೆ ವೇಳಾಪಟ್ಟಿ:
ಭೂಸೇನೆ ಅಗ್ನಿವೀರರ ಭರ್ತಿಗೆ ಇಂದು (ಜೂನ್ 20, 2022) ಕರಡು ಅಧಿಸೂಚನೆ ಹೊರಬೀಳಲಿದೆ ಎಂದು ಮೂಲಗಳು ತಿಳಿಸಿವೆ. ಜುಲೈ 01, 2022 ರ ನಂತರ ಭೂಸೇನಾ ನೇಮಕಾತಿ ಘಟಕಗಳು ಅಧಿಸೂಚನೆ ಹೊರಡಿಸಿದೆ.
ವಾಯುಪಡೆಯ ಅಗ್ನಿವೀರರ ನೇಮಕಕ್ಕೆ ವೇಳಾಪಟ್ಟಿ:
ವಾಯು ಪಡೆಗೆ ಅಗ್ನಿವೀರರ ನೇಮಕಕ್ಕೆ ಜೂನ್ 24 ರಿಂದ ರಿಜಿಸ್ಟ್ರೇಷನ್ ಆರಂಭವಾಗಲಿದೆ. ಏರ್‌ಪೋರ್ಸ್ ಮೊದಲ ಬ್ಯಾಚ್ ಅಗ್ನಿವೀರರ ನೇಮಕಕ್ಕೆ ಆನ್‌ಲೈನ್ ಪರೀಕ್ಷೆ ಪ್ರಕ್ರಿಯೆಯನ್ನು ಜುಲೈ 24 ರಂದು ಆರಂಭಿಸಲಾಗುತ್ತದೆ
ನೌಕಾಪಡೆಯಲ್ಲಿ ಅಗ್ನಿವೀರರ ನೇಮಕಕ್ಕೆ ವೇಳಾಪಟ್ಟಿ:
ಭಾರತೀಯ ನೌಕಾಪಡೆಗೆ (ಇಂಡಿಯನ್ ನೇವಿ) ಅಗ್ನಿವೀರರನ್ನು ನೇಮಕ ಮಾಡಿಕೊಳ್ಳಲು ಜುಲೈ 15 ರೊಳಗೆ ವಿಸ್ತೃತ ಮಾರ್ಗಸೂಚಿ ಪ್ರಕಟಿಸಲಾಗುತ್ತದೆ. ಮೊದಲ ಬ್ಯಾಚ್ ನೇವಿ ಅಗ್ನಿವೀರರು ಒಡಿಶಾದಲ್ಲಿರುವ ‘ಐಎನ್‌ಎಸ್ ಚಿಲ್ಕಾ’ದಲ್ಲಿ ತರಬೇತಿ ಕಾರ್ಯಕ್ರಮಕ್ಕೆ ಸೇರಲಿದ್ದಾರೆ
ಅಗ್ನಿಪಥ ಯೋಜನೆ ಎಂದರೇನು?
ಭಾರತೀಯ ರಕ್ಷಣಾ ಪಡೆಗೆ ಸೇರಲು ಬಯಸುವ ಅಭ್ಯರ್ಥಿಗಳಿಗೆ ಸದಾವಕಾಶ ನೀಡುವ, ಕೇಂದ್ರ ಸರ್ಕಾರದ ಹೊಸ ಯೋಜನೆಯೇ ‘ಅಗ್ನಿಪಥ’. ಈ ಯೋಜನೆ ಮೂಲಕ ಪ್ರಜೆಗಳು ಸೇನೆಗೆ ಸೇರುವ ಆಸೆಯನ್ನು ಈಡೇರಿಸುವ ಜತೆಗೆ ದೇಶ ಸೇವೆ ಮಾಡಲು ಅವಕಾಶ ನೀಡಲಾಗುತ್ತದೆ. ಅಲ್ಲದೇ ಪ್ರಜೆಗಳನ್ನು ಸಶಕ್ತಗೊಳಿಸುವ ಜತೆಗೆ, ನೀತಿ ಪಾಠ, ಕೌಶಲಗಳನ್ನು ಕಲಿಸಲಿದೆ.
ಅಗ್ನಿಪಥ ಯೋಜನೆಗೆ ಸೇರಲು ವಯಸ್ಸಿನ ಅರ್ಹತೆ ಏನು?
ಅಗ್ನಿಪಥ ಯೋಜನೆ ಅಡಿ ಸೇರಲು ಬಯಸುವ ಅಭ್ಯರ್ಥಿಗಳಿಗೆ ಕನಿಷ್ಠ 17.5 ವರ್ಷ ಆಗಿರಬೇಕು, ಗರಿಷ್ಠ 21 ವರ್ಷ ಮೀರಿರಬಾರದು.
ಅಗ್ನಿಪಥ ಯೋಜನೆ ಕುರಿತ ಮಾಹಿತಿಯನ್ನು ಪಡೆಯುವುದು ಎಲ್ಲಿ?
ಕೇಂದ್ರ ರಕ್ಷಣಾ ಇಲಾಖೆಯ ಅಧಿಕೃತ ವೆಬ್‌ಸೈಟ್ https://www.mygov.in/campaigns/agniveer ಗೆ ಭೇಟಿ ನೀಡುವ ಮೂಲಕ, ರಿಜಿಸ್ಟ್ರೇಷನ್ ಆರಂಭವಾದಾಗ ಅರ್ಜಿ ಸಲ್ಲಿಸಬೇಕು. ಅಗತ್ಯ ಮಾಹಿತಿಗಳನ್ನು ಸ್ವಯಂಕೃತವಾಗಿ ತಪ್ಪಾಗದ ರೀತಿ ನೀಡಿ, ಎನ್‌ರೋಲ್ ಮಾಡಿಕೊಳ್ಳಬಹುದು.
ಅಗ್ನಿಪಥ ಯೋಜನೆ ಅಗ್ನಿವೀರರ ವಿದ್ಯಾರ್ಹತೆ ಏನು?
ಕನಿಷ್ಠ 10ನೇ ತರಗತಿ ಪಾಸ್, 12 ನೇ ತರಗತಿ ಪಾಸ್ ವಿದ್ಯಾರ್ಹತೆ ಯುಳ್ಳವರು ಅಗ್ನಿಪಥ ಯೋಜನೆ ಅಗ್ನಿವೀರರ ಹುದ್ದೆಗೆ ಅರ್ಜಿ ಹಾಕಬಹುದು.
ಅಗ್ನಿಪಥ ಯೋಜನೆ ಅರ್ಜಿಗೆ ಅರ್ಹತೆಗಳೇನು?
ಕನಿಷ್ಠ 17.5 ವರ್ಷ ಆಗಿರಬೇಕು, ಗರಿಷ್ಠ 21 ವರ್ಷ ಮೀರಿರಬಾರದುಕೇಂದ್ರ ಸರ್ಕಾರವು ಅಗ್ನಿಪಥ್ ಯೋಜನೆಯ ಮೂಲಕ ನೇಮಕಾತಿಯಲ್ಲಿ ಅಗ್ನಿವೀರರ ಗರಿಷ್ಠ ವಯಸ್ಸಿನ ಮಿತಿಯನ್ನು 21 ವರ್ಷಗಳಿಂದ 23 ವರ್ಷಗಳಿಗೆ ವಿಸ್ತರಿಸಲಾಗಿದೆ ಎಂದು ಘೋಷಿಸಿದೆ. ಅಗ್ನಿಪಥ್ ಯೋಜನೆಯ ಕುರಿತು ಅಧಿಕೃತ ಹೇಳಿಕೆಯನ್ನು ನೀಡಿದ ರಕ್ಷಣಾ ಸಚಿವಾಲಯವು ಕಳೆದ ಎರಡು ವರ್ಷಗಳಲ್ಲಿ ಯಾವುದೇ ನೇಮಕಾತಿ ನಡೆಯದ ಕಾರಣ ಗರಿಷ್ಠ ವಯೋಮಿತಿಯಲ್ಲಿ ಒಂದು ಬಾರಿ ವಿನಾಯಿತಿ ನೀಡಲಾಗಿದೆ ಎಂದು ತಿಳಿಸಿದೆ). ಎಸ್‌ಎಸ್‌ಎಲ್‌ಸಿ, ಪಿಯುಸಿ ಪಾಸಾಗಿರಬೇಕು.
ಅಗ್ನಿಪಥ ಯೋಜನೆ ಕುರಿತ ಮಾಹಿತಿಯನ್ನು ಪಡೆಯುವುದು ಎಲ್ಲಿ?
ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ಅಗ್ನಿಪಥ ಯೋಜನೆ ಬಗ್ಗೆ ತಿಳಿಯಲು ವೆಬ್‌ಸೈಟ್ ವಿಳಾಸ https://www.mygov.in/campaigns/agniveer ಕ್ಕೆ ಭೇಟಿ ನೀಡಬಹುದು.
ಅಗ್ನಿಪಥ ಯೋಜನೆ ವೇತನ ಎಷ್ಟು?
ಮೊದಲನೇ ವರ್ಷದ ವಾರ್ಷಿಕ ವೇತನ ಪ್ಯಾಕೇಜ್ ರೂ.4.76 ಲಕ್ಷ ಇರಲಿದೆ. ಹಾಗೂ ನಾಲ್ಕನೇ ವರ್ಷದಲ್ಲಿ ರೂ.6.92 ಲಕ್ಷ ವೇತನವನ್ನು ಹೆಚ್ಚಿಸಿ ನೀಡಲಾಗುತ್ತದೆ.
ಅಗ್ನಿಪಥ ಯೋಜನೆ ಅಪ್ಲಿಕೇಶನ್ ಫಾರ್ಮ್ ಎಲ್ಲಿ ಲಭ್ಯ?
ಅಗ್ನಿಪಥ ಯೋಜನೆ ಅಡಿ ಅಗ್ನಿವೀರರನ್ನು ನೇಮಿಸಿಕೊಳ್ಳಲು ಮೂರು ತಿಂಗಳ ಒಳಗೆ ನೇಮಕ ಪ್ರಕ್ರಿಯೆ ಮುಗಿಸುವ ಉದ್ದೇಶ ಇದ್ದು, ವೆಬ್‌ಸೈಟ್ https://www.mygov.in/campaigns/agniveer ಗೆ ಭೇಟಿ ನೀಡಿ ರಿಜಿಸ್ಟ್ರೇಷನ್ ಪಡೆಯಬೇಕಾಗುತ್ತದೆ.
ಅಗ್ನಿಪಥ ಯೋಜನೆ ಪ್ರಕಟಣೆ ಆಗಿದ್ದು ಯಾವಾಗ?
ಅಗ್ನಿಪಥ ಯೋಜನೆಯನ್ನು ದಿನಾಂಕ 14-06-2022 ರಂದು ಪ್ರಕಟಿಸಲಾಗಿದೆ.
ಅಗ್ನಿಪಥ ಯೋಜನೆ ಅಡಿ ಎಷ್ಟು ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ?
46 ಸಾವಿರ ಅಗ್ನಿವೀರ ಹುದ್ದೆಗಳನ್ನು ಅಗ್ನಿಪಥ ಯೋಜನೆ ಅಡಿ ಭೂಸೇನೆ, ನೌಕಾ ಪಡೆ, ವಾಯುಪಡೆಗಳಲ್ಲಿ ನೇಮಕ ಮಾಡಲಾಗುತ್ತದೆ.
ಅಗ್ನಿಪಥ ಯೋಜನೆ ನೇಮಕಾತಿ ಅವಧಿ ಎಷ್ಟು?
ಅಗ್ನಿಪಥ ಯೋಜನೆ ಅಡಿ ನೇಮಕಗೊಳ್ಳುವ ಅಗ್ನಿವೀರರ ಹುದ್ದೆಗಳ ಅವಧಿ 4 ವರ್ಷ ಇರುತ್ತದೆ ಅಷ್ಟೆ. 4 ವರ್ಷ ಈ ಹುದ್ದೆಯಲ್ಲಿ ಸೇವೆ ಸಲ್ಲಿಸಿದವರು ಕಾಯಂ ಸೇನಾ ಸಿಬ್ಬಂದಿಗೆ ಶೇಕಡ.25 ಮೀಸಲಾತಿ ಅಡಿಯಲ್ಲಿ ಅರ್ಜಿ ಸಲ್ಲಿಸಬಹುದು. ಆಯ್ಕೆ ಪ್ರಕ್ರಿಯೆಯಲ್ಲಿ ಪಾಲ್ಗೊಂಡು ಖಾಯಂ ಸೇನಾ ಹುದ್ದೆಗಳನ್ನು ಪಡೆಯಬಹುದು.
ಅಗ್ನಿಪಥ ಯೋಜನೆಯ ಭತ್ಯೆಗಳು ಯಾವುವು?
ರಿಸ್ಕ್ ಅಂಡ್ ಹಾರ್ಡ್‌ಶಿಪ್, ರೇಷನ್, ಡ್ರೆಸ್, ಪ್ರಯಾಣ ಭತ್ಯೆಗಳನ್ನು ನೀಡಲಾಗುತ್ತದೆ.
ಅಗ್ನಿಪಥ ಯೋಜನೆ ಅಡಿ ನೀಡಲಾಗುವ ಪರಿಹಾರಗಳು ಯಾವುವು?
ರೂ.48 ಲಕ್ಷ ಮೊತ್ತದ ಜೀವ ವಿಮೆ ಇರುತ್ತದೆ. ಅಗ್ನಿವೀರರಿಂದ 9 ಸಾವಿರ ರೂ ಮತ್ತು ಸರ್ಕಾರದ 9 ಸಾವಿರ ರೂ ಗಳ ವಂತಿಗೆಯಿಂದ ಪ್ರತಿ ತಿಂಗಳು 18 ಸಾವಿರ ರೂ.ಗಳ ಪಿಎಫ್ ಸೌಲಭ್ಯ ಇರಲಿದೆ. ಒಟ್ಟಾರೆ ವಾರ್ಷಿಕ ಆದಾಯಕ್ಕೆ ತೆರಿಗೆಯಿಂದ ವಿನಾಯಿತಿ ಇದೆ. 48 ಲಕ್ಷ ರೂಪಾಯಿವರೆಗಿನ ವಿಮಾ ಸೌಲಭ್ಯ ಇರಲಿದ್ದು, ಇದಕ್ಕೆ ಸೈನಿಕರು ವಂತಿಕೆ ಕಟ್ಟಬೇಕಿಲ್ಲ. ನಿವೃತ್ತಿ ಸಮಯದಲ್ಲಿ ಒಟ್ಟು 11.70 ಲಕ್ಷ ರೂ ನಿವೃತ್ತಿಯ ಪ್ಯಾಕೇಜ್ ಸಿಗಲಿದೆ. ಆದರೆ, ಪಿಂಚಣಿ ಸೌಲಭ್ಯವಿರುವುದಿಲ್ಲ. ಸೇವಾ ಸಮಯದಲ್ಲಿ ಜೀವಹಾನಿಯಾದರೆ ಸೈನಿಕರ ಕುಟುಂಬಕ್ಕೆ ಒಂದು ಕೋಟಿ ರೂಪಾಯಿಗಳ ಪರಿಹಾರ ನೀಡಲಾಗುತ್ತದೆ. ಜತೆಗೆ ಉಳಿದ ಸೇವಾ ಅವಧಿಯ ಸಂಬಳ ಪ್ರಾಪ್ತವಾಗಲಿದೆ. ಒಂದು ವೇಳೆ ಸೇವೆ ಸಮಯದಲ್ಲಿ ಅಂಗವೈಕಲ್ಯವಾದರೆ ಅದರ ಗಂಭೀರತೆ ಆಧಾರದಲ್ಲಿ ಪರಿಹಾರ ಸಿಗಲಿದೆ. ಸಾಮಾನ್ಯವಾಗಿ ಇದು 44 ಲಕ್ಷ ರೂಪಾಯಿವರೆಗೆ ಇರಲಿದೆ. ಜತೆಗೆ ಸೇವೆಯ ಉಳಿದ ಭಾಗದ ಸಂಬಳ ದೊರೆಯಲಿದೆ.
ಅಗ್ನಿಪಥ ಯೋಜನೆಯ ವೇತನ:
ಮೊದಲನೇ ವರ್ಷ : ರೂ.30,000 ಜತೆಗೆ ಇತರೆ ಭತ್ಯೆಗಳು.
ಎರಡನೇ ವರ್ಷ : ರೂ.33,000 ಜತೆಗೆ ಇತರೆ ಭತ್ಯೆಗಳು.
ಮೂರನೇ ವರ್ಷ : ರೂ.36,500 ಜತೆಗೆ ಇತರೆ ಭತ್ಯೆಗಳು.
ನಾಲ್ಕನೇ ವರ್ಷ : ರೂ.40,000 ಜತೆಗೆ ಇತರೆ ಭತ್ಯೆಗಳು.
ಅಗ್ನಿಪಥ ಯೋಜನೆ ವಯಸ್ಸಿನ ಸಡಿಲಿಕೆ:
ಭಾರತೀಯ ಸೇನೆಯ ನಿಯಮಗಳ ಪ್ರಕಾರ
ಅಗ್ನಿಪಥ ಯೋಜನೆ ಅರ್ಜಿ ಶುಲ್ಕ:
ಅರ್ಜಿ ಶುಲ್ಕವಿಲ್ಲ
ಅಗ್ನಿಪಥ ಯೋಜನೆ ಆಯ್ಕೆ ಪ್ರಕ್ರಿಯೆ:
ಲಿಖಿತ ಪರೀಕ್ಷೆ , ದೈಹಿಕ ಸಾಮರ್ಥ್ಯ ಪರೀಕ್ಷೆ, ವೈದ್ಯಕೀಯ ಪರೀಕ್ಷೆ, ಸಹಿಷ್ಣುತೆ ಪರೀಕ್ಷೆ
ಅಗ್ನಿಪಥ ಯೋಜನೆ ಪ್ರಮುಖ ದಿನಾಂಕ ಗಳು :
ಭೂಸೇನೆ ಅಗ್ನಿವೀರರ ನೇಮಕಾತಿಗೆ ಅಧಿಸೂಚನೆ ಪ್ರಕಟಿಸುವ ದಿನಾಂಕ: 20-06-2022
ನೇಕಾಪಡೆ ಅಗ್ನಿವೀರರ ನೇಮಕಾತಿಗೆ ಅಧಿಸೂಚನೆ ಪ್ರಕಟಿಸುವ ದಿನಾಂಕ: 21-06-2022
ವಾಯುಪಡೆ ಅಗ್ನಿವೀರರ ನೇಮಕಾತಿಗೆ ಅಧಿಸೂಚನೆ ಪ್ರಕಟಿಸುವ ದಿನಾಂಕ: 24-06-2022
ನೂತನ ಅಧಿಸೂಚನೆ