111) ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನ ಪ್ರಥಮ ಮಹಿಳಾ ಅಧ್ಯಕ್ಷೆ ಯಾರಾಗಿದ್ದಾರೆ?
ಎ) ಶ್ರೀಮತಿ ಅನಿಬೆಸೆಂಟ್
ಬಿ) ಶ್ರೀಮತಿ ಸರೋಜಿನಿ ನಾಯ್ಡು
ಸಿ) ಶ್ರೀಮತಿ ಸೇನ್ ಗುಪ್ತಾ
ಡಿ) ಅರುಣ್ ಅಸಫ್ ಅಲಿ
112) ಸಂವಿಧಾನದ 17ನೇ ವಿಧಿಯು ಯಾವುದಕ್ಕೆ ಸಂಬಂಧಪಡುತ್ತದೆ?
ಎ) ಧರ್ಮ, ಜನಾಂಗ , ಜಾತಿ, ಲಿಂಗ ಅಥವಾ ಜನ್ಮಸ್ಥಳದ ಆಧಾರದಲ್ಲಿ ತಾರತಮ್ಯವನ್ನು ನಿಷೇಧ ಮಾಡುವುದು
ಬಿ) ಸಾರ್ವಜನಿಕ ಉದ್ಯೋಗದ ವಿಚಾರಗಳಲ್ಲಿ ಸಮಾನವಾದ ಅವಕಾಶವನ್ನು ಒದಗಿಸುವುದು
ಸಿ) ಅಲ್ಪಸಂಖ್ಯಾತರ ಭಾಷೆ, ಲಿಪಿ ಮತ್ತು ಸಂಸ್ಕೃತಿಯನ್ನು ಸಂರಕ್ಷಣೆ ಮಾಡುವುದು
ಡಿ) ಎಲ್ಲಾ ನಮೂನೆಗಳ ಅಸ್ಪೃಶ್ಯತೆಯನ್ನು ನಿಷೇಧಿಸುವುದು
113) ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರಾಗಿ ನೇಮಿಸಲು ವ್ಯಕ್ತಿಯು ಉಚ್ಚನ್ಯಾಯಾಲಯದಲ್ಲಿ ಎಷ್ಟು ಸಮಯ ಅಭ್ಯಾಸ ಮಾಡಿರಬೇಕು?
ಎ) ಹತ್ತು ವರ್ಷಗಳು
ಬಿ) 12 ವರ್ಷಗಳು
ಸಿ) 15 ವರ್ಷಗಳು
ಡಿ) 18 ವರ್ಷಗಳು
114) ಕ್ರಾಂತಿಕಾರರ ಒಂದು ಗೌಪ್ಯ ಸಂಘಟನೆಯಾಗಿದ್ದ ಅಭಿನವ ಭಾರತ ಇದನ್ನು ಸಂಘಟಿಸಿದವರು ಯಾರು?
ಎ) ವಿ. ಡಿ ಸಾವರ್ಕರ್
ಬಿ) ಖುದಿರಾಮ್ ಬೋಸ್
ಸಿ) ಭಗತ್ ಸಿಂಗ್
ಡಿ) ಪ್ರಫುಲ್ಲ ಚಕಿ
115) ಕೆಳಗಿನ ಹಕ್ಕುಗಳಲ್ಲಿ ಯಾವುದು ಡಾಕ್ಟರ್ ಬಿ. ಆರ್ ಅಂಬೇಡ್ಕರ್ ಅವರಿಂದ ಸಂವಿಧಾನದ ಹೃದಯ ಮತ್ತು ಆತ್ಮ ಎಂದು ವರ್ಣಿಸಲ್ಪಟ್ಟಿದೆ?
ಎ) ಆಸ್ತಿ ಹಕ್ಕು
ಬಿ) ಸಾಂವಿಧಾನಿಕ ಪರಿಹಾರಗಳ ಹಕ್ಕು
ಸಿ) ಸಮಾನತೆಯ ಹಕ್ಕು
ಡಿ) ಧರ್ಮದ ಆಚರಣೆಯ ಹಕ್ಕು
116) ಕೆಳಗಿನ ಸಂಘಟನೆಗಳಲ್ಲಿ ಯಾವುದು ಭಾರತದ ಸ್ಥಳಾಕೃತಿ ವಿಷಯ ಭೂಪಟಗಳನ್ನು ಸೃಷ್ಟಿಸುತ್ತದೆ?
ಎ) ಜಿಯೋಲಾಜಿಕಲ್ ಸರ್ವೆ ಆಫ್ ಇಂಡಿಯಾ
ಬಿ) ಸರ್ವೇ ಆಫ್ ಇಂಡಿಯಾ
ಸಿ) ಜಿಯೋಗ್ರಾಫಿಕಲ್ ಸರ್ವೆ ಆಫ್ ಇಂಡಿಯಾ
ಡಿ) ಮೇಲಿನ ಯಾವುದೂ ಅಲ್ಲ
117) ಒಂದು ಜಿಲ್ಲೆಯ ನ್ಯಾಯಾಧೀಶರನ್ನು ಯಾರು ನೇಮಕ ಮಾಡುತ್ತಾರೆ?
ಎ) ಒಂದು ರಾಜ್ಯದ ರಾಜ್ಯಪಾಲರು
ಬಿ) ಒಂದು ರಾಜ್ಯದ ಮುಖ್ಯಮಂತ್ರಿಗಳು
ಸಿ) ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರು
ಡಿ) ರಾಜ್ಯ ಸಾರ್ವಜನಿಕ ಸೇವಾ ಆಯೋಗ
118) ಕೆಳಗಿನವುಗಳಲ್ಲಿ ಯಾವುದು ಭಾರತದಲ್ಲಿ ಅತ್ಯಂತ ಪುರಾತನ ಶಿಲೆಯನ್ನು ಹೊಂದಿದೆ?
ಎ) ಹಿಮಾಲಯ
ಬಿ) ಇಂಡೋ-ಗಂಗಾ ಬಯಲು ಪ್ರದೇಶ
ಸಿ) ಅರಾವಳಿ
ಡಿ) ಶಿವಾಲಿಕ್
119) ಈ ಕೆಳಗಿನ ಯಾವ ನದಿ ಪಶ್ಚಿಮಾಭಿಮುಖವಾಗಿ ಹರಿಯುವುದಿಲ್ಲ?
ಎ) ಶರಾವತಿ
ಬಿ) ನೇತ್ರಾವತಿ
ಸಿ) ಹೇಮಾವತಿ
ಡಿ) ಮಹದಾಯಿ
120) ಜೆಟ್ ವಿಮಾನಗಳ ಹಾರಾಟಕ್ಕೆ ಈ ಕೆಳಗಿನವುಗಳಲ್ಲಿ ಯಾವುದು ಅತ್ಯಂತ ಸೂಕ್ತ ಮೇಲ್ಮೈ ಆಗಿರುತ್ತದೆ?
ಎ) ಟ್ರೊಪ್ರೋ ಪಿಯರ್
ಬಿ) ಮೆಸೋಸ್ಪಿಯರ್
ಸಿ) ಥರ್ಮೋ ಸ್ಪಿಯರ್
ಡಿ) ಸ್ಟ್ರಾಟೋ ಸ್ಪಿಯರ್
tq