ಜಾಗತಿಕ ಲಿಂಗ ಅಸಮಾನತೆ ಅಂತ್ಯಕ್ಕೆ 135.6 ವರ್ಷಗಳು ಬೇಕು- ಡಬ್ಲ್ಯೂಇಎಫ್ ವರದಿ

ಅಂತಾರಾಷ್ಟ್ರೀಯ ಸುದ್ದಿಗಳು

ಕೋವಿಡ್ -19 ಸಾಂಕ್ರಾಮಿಕ ರೋಗದ ಭೀತಿಯು ಜಗತ್ತಿನಾದ್ಯಂತ ಮಹಿಳೆಯರಿಗೆ ತಟ್ಟಿದೆ ಮತ್ತು ಅಂತರ್ಗತ, ಸಮೃದ್ಧ ಆರ್ಥಿಕತೆ ಮತ್ತು ಸಮಾಜಗಳನ್ನು ನಿರ್ಮಿಸಲು ಹೊಸ ಅಡೆತಡೆಗಳನ್ನು ಹುಟ್ಟುಹಾಕಿರುವುದು ನಿಜವೆಂಬುದು ವಿಶ್ವ ಆರ್ಥಿಕ ವೇದಿಕೆ ಪ್ರಕಟಿಸಿರುವ ಜಾಗತಿಕ ಲಿಂಗ ಅಸಮಾನತೆ ವರದಿ 2021ರಲ್ಲಿ ಸಾಬೀತಾಗಿದೆ.ಲಾಕ್ ಡೌನ್ ನಿಂದ ಬಹಳಷ್ಟು ಹೊಡೆತ ಬಿದ್ದಿದೆ ಎಂದು ಹೇಳುವ ವರದಿ, ಮನೆಯಲ್ಲಿ ಆರೈಕೆಯಂತಹ ಹೆಚ್ಚುವರಿ ಕೆಲಸದೊಂದಿಗೆ ಬಿಕ್ಕಟ್ಟುಗಳು, ಆರ್ಥಿಕತೆಗಳು ಮತ್ತು ಕೈಗಾರಿಕೆಗಳಲ್ಲಿ ಲಿಂಗ ಸಮಾನತೆ ಪ್ರಗತಿಯನ್ನುಸ್ಥಗಿತಗೊಳಿಸಿವೆ ಎಂದು ಡಬ್ಲ್ಯೂಇಎಫ್ ನ ಹೊಸ ಆರ್ಥಿಕತೆ ಮತ್ತು ಸಮಾಜ ಕೇಂದ್ರದ ಮುಖ್ಯಸ್ಥೆ ಹಾಗೂ ವ್ಯವಸ್ಥಾಪಕ ನಿರ್ದೇಶಕಿ ಸಾಡಿಯಾ ಜಾಹಿದಿ ಬರೆಯುತ್ತಾರೆ.ವಶ್ವ ಆರ್ಥಿಕ ವೇದಿಕೆಯ ಜಾಗತಿಕ ಲಿಂಗ ಅಸಮಾನತೆ ವರದಿಯ 15 ನೇ ಆವೃತ್ತಿಯು 156 ದೇಶಗಳಲ್ಲಿನ ‘ಲಿಂಗ ಸಮಾನತೆಯ ಸೂಚ್ಯಂಕವಾಗಿದೆ. ಇದು ನಾಲ್ಕು ವಿಶಾಲ ಮಾನದಂಡಗಳ ಮೇಲಿನ ಶ್ರೇಣೀಕೃತ ಮೌಲ್ಯಮಾಪನಗಳನ್ನು ಆಧರಿಸಿದೆ – ರಾಜಕೀಯ ಮತ್ತು ಆರ್ಥಿಕತೆಯಲ್ಲಿ ಮಹಿಳೆಯರ ಭಾಗವಹಿಸುವಿಕೆ ಮತ್ತು ಈ ಪ್ರತಿಯೊಂದು ದೇಶಗಳಲ್ಲಿ ಆರೋಗ್ಯ ಮತ್ತು ಶಿಕ್ಷಣದಲ್ಲಿ ಅವರ ಪಾತ್ರವನ್ನು ಪರಿಗಣಿಸುತ್ತದೆ.

ವರದಿ ಪ್ರಕಾರ, ಮಧ್ಯಪ್ರಾಚ್ಯ ಮತ್ತು ಉತ್ತರ ಆಫ್ರಿಕಾದ ನಂತರ ದಕ್ಷಿಣ ಏಷ್ಯಾ ಸೂಚ್ಯಂಕದಲ್ಲಿ ಎರಡನೇ ಕಳಪೆ ಪ್ರದರ್ಶನ ತೋರಿದೆ. ಒಟ್ಟಾರೇ ಶೇ. 62.3 ರಷ್ಟು ಲಿಂಗ ಅಸಮಾನತೆ ಇದೆ. ಇತ್ತೀಚಿನ ದಿನಗಳಲ್ಲಿ ಪ್ರಗತಿ ತುಂಬಾ ನಿಧಾನವಾಗಿದೆ, ಮತ್ತು ಈ ವರ್ಷ ಅದು ನಿಜವಾಗಿ ವ್ಯತಿರಿಕ್ತವಾಗಿದೆ. ಈ ಪ್ರದೇಶದಲ್ಲಿ ಲಿಂಗ ಅಸಮಾನತೆ ಅಂತ್ಯಗೊಳಿಸಲು ಅಂದಾಜು 195.4 ವರ್ಷಗಳೇ ಬೇಕಾಗಲಿದೆ ಎಂದು ವರದಿ ಎಚ್ಚರಿಕೆ ನೀಡಿದೆ.

ಸದ್ಯದ ಪರಿಸ್ಥಿತಿಯಲ್ಲಿ ಜಾಗತಿಕ ಲಿಂಗ ಅಸಮಾನತೆ ಕೊನೆಗೊಳಿಸಲು 135.6 ವರ್ಷಗಳನ್ನು ತೆಗೆದುಕೊಳ್ಳಲಿದೆ ಎಂದು ವಿಶ್ವ ಆರ್ಥಿಕ ವೇದಿಕೆ, ಜಾಗತಿಕ ಲಿಂಗ ಅಸಮಾನತೆ ವರದಿ 2021ರಲ್ಲಿ ಹೇಳಿದೆ. ಈ ವಲಯದಲ್ಲಿ ಭಾರತದ್ದು ಮೂರನೇ ಕಳಪೆ ಪ್ರದರ್ಶನವಾಗಿದೆ. ಇಲ್ಲಿ ಲಿಂಗ ಅಸಮಾನತೆ ಶೇ. 62.5 ರಷ್ಟಿದೆ. ದೊಡ್ಡ ಜನಸಂಖ್ಯೆಯ ಕಾರಣ, ಭಾರತದ ಕಾರ್ಯಕ್ಷಮತೆಯು ಈ ಪ್ರದೇಶದ ಒಟ್ಟಾರೆ ಕಾರ್ಯಕ್ಷಮತೆಯ ಮೇಲೆ ಸಾಕಷ್ಟು ಪರಿಣಾಮ ಬೀರುತ್ತದೆ. 0.65 ಶತಕೋಟಿ ಮಹಿಳೆಯರಿಗೆ ನೆಲೆಯಾಗಿರುವ ಭಾರತದಲ್ಲಿ ವರ್ಷದ ಹಿಂದೆ ಶೇ. 66.8 ರಷ್ಟಿದ್ದ ಲಿಂಗ ಅಸಮಾನತೆ ಈ ವರ್ಷ ಶೇ.62.5 ರಷ್ಟಿದೆ ಎಂದು ವರದಿ ಹೇಳಿದೆ.

ಭಾರತದಲ್ಲಿ ಕೇವಲ ಶೇ.22.3 ರಷ್ಟು ಮಹಿಳೆಯರು ಮಾತ್ರ ಲೇಬರ್ ಮಾರುಕಟ್ಟೆಯಲ್ಲಿ ಸಕ್ರೀಯರಾಗಿದ್ದಾರೆ. 29.2 ರಷ್ಟು ಮಹಿಳೆಯರು ತಾಂತ್ರಿಕ ಪಾತ್ರ ನಿರ್ವಹಿಸುತ್ತಿದ್ದರೆ ಶೇ. 14.6 ರಷ್ಟು ಮಹಿಳೆಯರು ಸಿನಿಯರ್ ಪಾತ್ರ ನಿರ್ವಹಿಸುತ್ತಿದ್ದಾರೆ. ಭಾರತೀಯ ಮಹಿಳೆಯರ ಸರಾಸರಿ ಆದಾಯ, ಭಾರತೀಯ ಪುರುಷರ ಸರಾಸರಿಗಿಂತ ಶೇಕಡಾ 20.7 ಕ್ಕಿಂತ ಕಡಿಮೆಯಿದೆ ಮತ್ತು ಮಹಿಳಾ ಮಂತ್ರಿಗಳ ಪಾಲು ಶೇಕಡಾ 23.1 ರಿಂದ 9.1 ಕ್ಕೆ ಇಳಿದಿದೆ ಎಂದು ಡಬ್ಲ್ಯುಇಎಫ್ ಇಂಡಿಯಾ ಸಂಶೋಧನೆಗಳು ತಿಳಿಸಿವೆ. ಪ್ರಸ್ತುತ ಪ್ರಗತಿಯ ದರದಲ್ಲಿ, ರಾಜಕೀಯದಲ್ಲಿ ಲಿಂಗ ಸಮಾನತೆಯನ್ನು ಸಾಧಿಸಲು 145.5 ವರ್ಷಗಳು ಬೇಕಾಗುತ್ತದೆ ಎಂದು ವರದಿ ಹೇಳಿದೆ

ವಿಶ್ವ ಆರ್ಥಿಕ ವೇದಿಕೆ 2021 ರಲ್ಲಿ ಜಾಗತಿಕ ಲಿಂಗ ಅಂತರ ವರದಿ 2021 ರಲ್ಲಿ ಭಾರತವು 28 ಸ್ಥಾನಗಳನ್ನು ಕಳೆದುಕೊಂಡು 156 ದೇಶಗಳಲ್ಲಿ 140 ನೇ ಸ್ಥಾನದಲ್ಲಿದೆ. 2020 ರಲ್ಲಿ ಭಾರತವು 153 ದೇಶಗಳಲ್ಲಿ 112 ನೇ ಸ್ಥಾನದಲ್ಲಿದೆ. ಐಸ್ಲ್ಯಾಂಡ್ 12 ನೇ ಬಾರಿಗೆ ವಿಶ್ವದ ಅತ್ಯಂತ ಲಿಂಗ-ಸಮಾನ ದೇಶವಾಗಿ ಸೂಚ್ಯಂಕದಲ್ಲಿ ಅಗ್ರಸ್ಥಾನದಲ್ಲಿದೆ. ವರದಿಯಲ್ಲಿ ಅಫ್ಘಾನಿಸ್ತಾನವು ಅತ್ಯಂತ ಕೆಟ್ಟದಾಗಿ ಕಾರ್ಯನಿರ್ವಹಿಸುತ್ತಿರುವ ದೇಶವಾಗಿದೆ.

ದಕ್ಷಿಣ ಏಷ್ಯಾ:

ಭಾರತವು ದಕ್ಷಿಣ ಏಷ್ಯಾದಲ್ಲಿ ಮೂರನೇ ಅತಿ ಹೆಚ್ಚು ಪ್ರದರ್ಶನ ನೀಡುವ ದೇಶವಾಗಿ ಹೊರಹೊಮ್ಮಿತು.
ದಕ್ಷಿಣ ಏಷ್ಯಾದಲ್ಲಿ ಬಾಂಗ್ಲಾದೇಶ ಅತ್ಯುತ್ತಮ ಪ್ರದರ್ಶನ ನೀಡುತ್ತಿದೆ.
ಭಾರತದ ನೆರೆಯವರಲ್ಲಿ ಬಾಂಗ್ಲಾದೇಶ 65, ನೇಪಾಳ 106, ಪಾಕಿಸ್ತಾನ 153, ಅಫ್ಘಾನಿಸ್ತಾನ 156, ಭೂತಾನ್ 130 ಮತ್ತು ಶ್ರೀಲಂಕಾ 116 ಸ್ಥಾನದಲ್ಲಿದೆ.
ದಕ್ಷಿಣ ಏಷ್ಯಾದಲ್ಲಿ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ಮಾತ್ರ ಭಾರತಕ್ಕಿಂತ ಕೆಳಗಿವೆ.

ಟಾಪ್ 10 ಲಿಂಗ-ಸಮಾನ ದೇಶ

1) ಐಸ್ಲ್ಯಾಂಡ್
2) ಫಿನ್ಲ್ಯಾಂಡ್
3) ನಾರ್ವೆ
4) ನ್ಯೂಜಿಲೆಂಡ್
5) ರುವಾಂಡಾ
6) ಸ್ವೀಡನ್
7) ನಮೀಬಿಯಾ
8) ಲಿಥುವೇನಿಯಾ
9) ಐರ್ಲೆಂಡ್
10) ಸ್ವಿಟ್ಜರ್ಲೆಂಡ್

ಜಾಗತಿಕ ಲಿಂಗ ಅಂತರ ವರದಿ:
ಗ್ಲೋಬಲ್ ಜೆಂಡರ್ ಗ್ಯಾಪ್ ರಿಪೋರ್ಟ್ 2021 ಡಬ್ಲ್ಯುಇಎಫ್ ವಾರ್ಷಿಕ ಪ್ರಕಟಣೆಯ 15 ನೇ ಆವೃತ್ತಿಯಾಗಿದೆ.
ಆರ್ಥಿಕ ಅವಕಾಶಗಳು, ಶಿಕ್ಷಣ, ಆರೋಗ್ಯ ಮತ್ತು ರಾಜಕೀಯ ನಾಯಕತ್ವ ಎಂಬ ನಾಲ್ಕು ಆಯಾಮಗಳಲ್ಲಿ ದೇಶಗಳ ಲಿಂಗ ಅಂತರವನ್ನು ಹೋಲಿಸಲು ಜಾಗತಿಕ ಲಿಂಗ ಅಂತರ ಸೂಚ್ಯಂಕವನ್ನು ಮೊದಲ ಬಾರಿಗೆ 2006 ರಲ್ಲಿ ವಿಶ್ವ ಆರ್ಥಿಕ ವೇದಿಕೆಯು ಪರಿಚಯಿಸಿತು.

ವಿಶ್ವ ಆರ್ಥಿಕ ವೇದಿಕೆಯ ಪ್ರಧಾನ ಕಚೇರಿಗಳು: ಕಾಲೊಗ್ನಿ, ಸ್ವಿಟ್ಜರ್ಲೆಂಡ್.
ವಿಶ್ವ ಆರ್ಥಿಕ ವೇದಿಕೆ ಸ್ಥಾಪಕ: ಕ್ಲಾಸ್ ಶ್ವಾಬ್.
ವಿಶ್ವ ಆರ್ಥಿಕ ವೇದಿಕೆ ಸ್ಥಾಪನೆ: ಜನವರಿ 1971
.

Leave a Reply

Your email address will not be published. Required fields are marked *