4
ಹಾಸನ ಜಿಲ್ಲಾ ಪಂಚಾಯಿತಿ ವೇತನದ ವಿವರ:ತಜ್ಞ ವೈದ್ಯರು ಆಯುರ್ವೇದ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 35,000/-ರೂ ಜೊತೆಗೆ 5,000/-ರೂ ಸ್ನಾತಕೋತ್ತರ ಭತ್ಯೆ, ತಜ್ಞ ವೈದ್ಯರು ಯುನಾನಿ, ತಜ್ಞ ವೈದ್ಯರು ಹೋಮಿಯೋಪಥಿ, ತಜ್ಞ ವೈದ್ಯರು ಪ್ರ.ಚಿ ಮತ್ತು ಯೋ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 35,000/ ಜೊತೆಗೆ 5,000/-ರೂ ಸ್ನಾತಕೋತ್ತರ ಭತ್ಯೆ, ಆಯುಷ್ ಔಷಧಿ ವಿತರಕರು ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 15,821/-ರೂ, ಮಸಾಜಿಸ್ಟ್, ಕ್ಷಾರಸೂತ್ರ ಅಟೆಂಡೆಂಟ್ ಮತ್ತು ಸ್ರ್ರೀ ರೋಗ ಅಟೆಂಡೆಂಟ್ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 11,356/-ರೂ ಮತ್ತು ಮಲ್ಟಿಪರ್ಪಸ್ ವರ್ಕರ್ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 10,300/ರೂ ವೇತನವನ್ನು ನೀಡಲಾಗುವುದು.
ಹಾಸನ ಜಿಲ್ಲಾ ಪಂಚಾಯಿತಿ, ಆಯುಷ್ ಇಲಾಖೆಯಲ್ಲಿ ಕಾರ್ಯನಿರ್ವಹಿಸಲು 20 ತಜ್ಞ ವೈದ್ಯರು/ಅರೆ ವೈದ್ಯಕೀಯ ಸಿಬ್ಬಂದಿಗಳ ನೇಮಕಾತಿಗೆ ಅರ್ಜಿ ಅಹ್ವಾನಿಸಲಾಗಿದೆ. ಆಸಕ್ತರು ಅಧಿಸೂಚನೆಯನ್ನು ಓದಿಕೊಂಡು ಅರ್ಜಿಯನ್ನು ಸಲ್ಲಿಸಬಹುದು.
ಹಾಸನ ಜಿಲ್ಲಾ ಪಂಚಾಯಿತಿ ವಿದ್ಯಾರ್ಹತೆ: ಎಂಎಸ್, ಎಂಡಿ, ಪೋಸ್ಟ್ ಗ್ರಾಜುಯೇಟ್ ಪದವಿ, ಎಸ್.ಎಸ್.ಎಲ್.ಸಿ ಮತ್ತು ಔಷಧಿ ವಿಜ್ಞಾನದಲ್ಲಿ ಡಿಪ್ಲೋಮಾ ತರಬೇತಿ, 7ನೇ ತರಗತಿ ಮತ್ತು 10ನೇ ತರಗತಿ ವಿದ್ಯಾರ್ಹೆತೆಯನ್ನು ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಹಾಸನ ಜಿಲ್ಲಾ ಪಂಚಾಯಿತಿ ವಯೋಮಿತಿ:ನವೆಂಬರ್ 10,2020ರ ಅನ್ವಯ ಕನಿಷ್ಟ 18 ರಿಂದ ಗರಿಷ್ಟ 40 ವರ್ಷದೊಳಗಿನ ಪ.ಜಾತಿ ಮತ್ತು ಪ.ಪಂಗಡದ ಅಭ್ಯರ್ಥಿಗಳು, ಗರಿಷ್ಟ 38 ವರ್ಷದೊಳಗಿನ ಪ್ರ-1, 2ಎ, 2ಬಿ, 3ಎ ಮತ್ತು 3ಬಿ ಅಭ್ಯರ್ಥಿಗಳು ಮತ್ತು ಗರಿಷ್ಟ 35 ವರ್ಷದೊಳಗಿನ ಸಾಮಾನ್ಯ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಹಾಸನ ಜಿಲ್ಲಾ ಪಂಚಾಯಿತಿ ವೇತನದ ವಿವರ:ತಜ್ಞ ವೈದ್ಯರು ಆಯುರ್ವೇದ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 35,000/-ರೂ ಜೊತೆಗೆ 5,000/-ರೂ ಸ್ನಾತಕೋತ್ತರ ಭತ್ಯೆ, ತಜ್ಞ ವೈದ್ಯರು ಯುನಾನಿ, ತಜ್ಞ ವೈದ್ಯರು ಹೋಮಿಯೋಪಥಿ, ತಜ್ಞ ವೈದ್ಯರು ಪ್ರ.ಚಿ ಮತ್ತು ಯೋ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 35,000/ ಜೊತೆಗೆ 5,000/-ರೂ ಸ್ನಾತಕೋತ್ತರ ಭತ್ಯೆ, ಆಯುಷ್ ಔಷಧಿ ವಿತರಕರು ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 15,821/-ರೂ, ಮಸಾಜಿಸ್ಟ್, ಕ್ಷಾರಸೂತ್ರ ಅಟೆಂಡೆಂಟ್ ಮತ್ತು ಸ್ರ್ರೀ ರೋಗ ಅಟೆಂಡೆಂಟ್ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 11,356/-ರೂ ಮತ್ತು ಮಲ್ಟಿಪರ್ಪಸ್ ವರ್ಕರ್ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 10,300/ರೂ ವೇತನವನ್ನು ನೀಡಲಾಗುವುದು.
ಹಾಸನ ಜಿಲ್ಲಾ ಪಂಚಾಯಿತಿ ಆಯ್ಕೆ ಪ್ರಕ್ರಿಯೆ: ಅಭ್ಯರ್ಥಿಗಳನ್ನು ಮೆರಿಟ್ ಆಧಾರದ ಮೇಲೆ, ವೃತ್ತಿ ಅನುಭವದ ಆಧಾರದ ಮೇಲೆ, ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.
ಹಾಸನ ಜಿಲ್ಲಾ ಪಂಚಾಯಿತಿ ಅರ್ಜಿ ಶುಲ್ಕ: ಅರ್ಜಿದಾರರು ಯಾವುದೇ ಅರ್ಜಿ ಶುಲ್ಕವನ್ನು ಪಾವತಿಸುವಂತಿಲ್ಲ.
Karnataka High Court Recruitment 2020
ಹಾಸನ ಜಿಲ್ಲಾ ಪಂಚಾಯಿತಿ ಅರ್ಜಿ ಸಲ್ಲಿಕೆ: ಅರ್ಜಿಗಳನ್ನು ಜಿಲ್ಲಾ ಆಯುಷ್ ಅಧಿಕಾರಿಗಳ ಕಛೇರಿ, ಹಾಸನ ಮತ್ತು ವೆಬ್‌ಸೈಟ್ https://hassan.nic.in/en/ ಗೆ ಭೇಟಿ ನೀಡಿ ಪಡೆಯಬಹುದು. ಭರ್ತಿ ಮಾಡಿದ ಅರ್ಜಿಗಳನ್ನು ಸಲ್ಲಿಸಲು ನವೆಂಬರ್ 10,2020ರ ಸಂಜೆ 4:30ರೊಳಗೆ ಸಲ್ಲಿಸಬೇಕಿರುತ್ತದೆ. ನಂತರ ಬಂದ ಅರ್ಜಿಗಳನ್ನು ತಿರಸ್ಕರಿಸಲಾಗುವುದು. ಭರ್ತಿ ಮಾಡಿದ ಅರ್ಜಿಗಳನ್ನು ಖುದ್ದಾಗಿ ಅಥವಾ ಅಂಚೆ ಮೂಲಕ ಕಛೇರಿ ವಿಳಾಸಕ್ಕೆ ಸಲ್ಲಿಸಿದ್ದಲ್ಲಿ ಮಾತ್ರ ಪರಿಗಣಿಸಲಾಗುವುದು. ಅಭ್ಯರ್ಥಿಗಳು ಒಂದಕ್ಕಿಂತ ಹೆಚ್ಚು ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸಿದ್ದಲ್ಲಿ ಪ್ರತ್ಯೇಕ ಅರ್ಜಿಗಳನ್ನು ಸಲ್ಲಿಸತಕ್ಕದ್ದು.
ಹಾಸನ ಜಿಲ್ಲಾ ಪಂಚಾಯಿತಿ ಕೊನೆ ದಿನ :ನವೆಂಬರ್ 10,2020
ಅಧಿಕೃತ ನೋಟಿಫಿಕೇಶನ್
ಅಧಿಕೃತ ವೆಬ್‌ಸೈಟ್
Post Views: 610