ಹೆನ್ಲಿ ಪಾಸ್‌ಪೋರ್ಟ್ ಸೂಚ್ಯಂಕ 2021 ಭಾರತದ ಸ್ಥಾನ:
ಹೆನ್ಲಿ ಪಾಸ್‌ಪೋರ್ಟ್ ಸೂಚ್ಯಂಕ 2021 ರಲ್ಲಿ ಭಾರತದ ಸ್ಥಾನವು ಕಳೆದ ವರ್ಷದಿಂದ 90 ಸ್ಥಾನಗಳಿಗೆ ಇಳಿದಿದೆ, ಇದು ವಿಶ್ವದ ಅತ್ಯಂತ ಪ್ರಯಾಣ ಸ್ನೇಹಿ ಪಾಸ್‌ಪೋರ್ಟ್‌ಗಳಾದ ಜಪಾನ್ ಮತ್ತು ಸಿಂಗಾಪುರ್ ಪಾಸ್‌ಪೋರ್ಟ್ ಸೂಚ್ಯಂಕದಲ್ಲಿ ಮೊದಲ ಸ್ಥಾನದಲ್ಲಿದೆ.
ಸೂಚ್ಯಂಕವು 227 ಸ್ಥಳಗಳು ಮತ್ತು 199 ಪಾಸ್‌ಪೋರ್ಟ್‌ಗಳನ್ನು ಒಳಗೊಂಡಿದೆ.
COVID-19 ಸಾಂಕ್ರಾಮಿಕ ರೋಗವು ಪ್ರಾರಂಭವಾದ ಸುಮಾರು ಎರಡು ವರ್ಷಗಳ ನಂತರ ದೇಶಗಳು ಅಂತರರಾಷ್ಟ್ರೀಯ ಸಂದರ್ಶಕರಿಗೆ ಪ್ರಯಾಣ ನಿರ್ಬಂಧಗಳನ್ನು ಸರಾಗಗೊಳಿಸುವ ಸಮಯದಲ್ಲಿ ಸೂಚ್ಯಂಕ ಬರುತ್ತದೆ.
ಅಂತಾರಾಷ್ಟ್ರೀಯ ವಾಯು ಸಾರಿಗೆ ಸಂಸ್ಥೆ (ಐಎಟಿಎ) ದತ್ತಾಂಶದ ಸಮೀಕ್ಷೆಯ ಆಧಾರದ ಮೇಲೆ ಶ್ರೇಯಾಂಕಗಳನ್ನು ನೀಡಲಾಗಿದೆ.

ಸೂಚ್ಯಂಕದಲ್ಲಿ ಅಗ್ರ 5 ದೇಶಗಳು:
- ಶ್ರೇಣಿ 1: ಜಪಾನ್, ಸಿಂಗಾಪುರ
- ಶ್ರೇಣಿ 2: ಜರ್ಮನಿ, ದಕ್ಷಿಣ ಕೊರಿಯಾ
- ಶ್ರೇಣಿ 3: ಫಿನ್ಲ್ಯಾಂಡ್, ಇಟಲಿ, ಲಕ್ಸೆಂಬರ್ಗ್, ಸ್ಪೇನ್
- ಶ್ರೇಣಿ 4: ಆಸ್ಟ್ರಿಯಾ, ಡೆನ್ಮಾರ್ಕ್
- ಶ್ರೇಣಿ 5: ಫ್ರಾನ್ಸ್, ಐರ್ಲೆಂಡ್, ನೆದರ್ಲ್ಯಾಂಡ್ಸ್, ಪೋರ್ಚುಗಲ್, ಸ್ವೀಡನ್
ಈ ಸೂಚ್ಯಂಕವು ಅಂತರರಾಷ್ಟ್ರೀಯ ವಾಯು ಸಾರಿಗೆ ಒಕ್ಕೂಟದ (IATA) ಎಕ್ಸ್ಕ್ಲೂಸಿವ್ ಆದ ಡೇಟಾ ಆಧಾರದಲ್ಲಿ ನಿಂತಿದೆ. ಇತ್ತೀಚಿನ ಶ್ರೇಯಾಂಕವು ಗ್ಲೋಬಲ್ ಮೊಬಿಲಿಟಿ ರಿಪೋರ್ಟ್ 2021 Q4ದಲ್ಲಿ ದೊರೆಯುತ್ತದೆ. ಇದು 199 ಪಾಸ್‌ಪೋರ್ಟ್‌ಗಳು ಮತ್ತು 227 ಸ್ಥಳಗಳಲ್ಲಿ ಕಾಣುತ್ತದೆ.
ಕಳೆದ ವರ್ಷ 84 ಸ್ಥಾನದಲ್ಲಿದ್ದ ಭಾರತ ಈ ವರ್ಷ 90ನೇ ಸ್ಥಾನಕ್ಕೆ ಕುಸಿದಿದೆ.
*ಜಪಾನ್ ಮತ್ತು ಸಿಂಗಾಪೂರ್ ತಲಾ 192 ಪಾಯಿಂಟ್ಗಳೊಂದಿಗೆ ಮೊದಲ ಸ್ಥಾನದಲ್ಲಿದೆ.
*ಜರ್ಮನಿ ಮತ್ತು ದಕ್ಷಿಣ ಕೊರಿಯಾ 190 ಪಾಯಿಂಟ್ಸ್ನೊಂದಿಗೆ ಎರಡನೇ ಸ್ಥಾನ
*ಫಿನ್ಲ್ಯಾಂಡ್, ಇಟಲಿ, ಲಕ್ಸೆಂಬರ್ಗ್ ಮತ್ತು ಸ್ಪೇನ್ ತಲಾ 189 ಪಾಯಿಂಟ್ಸ್ನೊಂದಿಗೆ ಮೂರನೇ ಸ್ಥಾನ
* ಆಸ್ಟ್ರಿಯಾ, ಡೆನ್ಮಾರ್ಕ್ ತಲಾ 188 ಪಾಯಿಂಟ್ಸ್ನೊದಿಗೆ ನಾಲ್ಕನೇ ಸ್ಥಾನ
*ಫ್ರಾನ್ಸ್, ಐರ್ಲೆಂಡ್, ನೆದರ್ಲ್ಯಾಂಡ್ಸ್, ಪೋರ್ಚುಗಲ್ ಮತ್ತು ಸ್ವೀಡನ್ ತಲಾ 187 ಪಾಯಿಂಟ್ಸ್ನೊಂದಿಗೆ ಐದನೇ ಸ್ಥಾನ
* ಬೆಲ್ಜಿಯಂ, ನ್ಯೂಜಿಲ್ಯಾಂಡ್, ಸ್ವಿಟ್ಜರ್ಲೆಂಡ್ ತಲಾ 186 ಪಾಯಿಂಟ್ಸ್ – ಆರನೇ ಸ್ಥಾನ
* ಜೆಕ್ ರಿಪಬ್ಲಿಕ್, ಗ್ರೀಸ್, ಮಾಲ್ಟಾ, ನಾರ್ವೆ, ಯುನೈಟೆಡ್ ಕಿಂಗ್ಡಮ್ ಮತ್ತು ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾ 185 ಪಾಯಿಂಟ್ಸ್- ಏಳನೇ ಸ್ಥಾನ
* ಆಸ್ಟ್ರೇಲಿಯಾ, ಕೆನಡಾ ತಲಾ 184 ಪಾಯಿಂಟ್ಸ್ ಜತೆ ಎಂಟನೇ ಸ್ಥಾನ
* 183 ಪಾಯಿಂಟ್ಸ್ನೊಂದಿಗೆ ಹಂಗೇರಿ 9ನೇ ಸ್ಥಾನ
*ಲಿಥುವೇನಿಯಾ, ಪೋಲೆಂಡ್, ಸ್ಲೊವಾಕಿಯಾ ಹತ್ತನೇ ಸ್ಥಾನದಲ್ಲಿದ್ದು, ತಲಾ 182 ಪಾಯಿಂಟ್ಸ್ ಇದೆ
* ಕಳೆದ ವರ್ಷ 84 ಸ್ಥಾನದಲ್ಲಿ ಇದ್ದ ಭಾರತ ಈ ವರ್ಷ 90ನೇ ಸ್ಥಾನಕ್ಕೆ ಇಳಿದಿದೆ. 58 ಪಾಯಿಂಟ್ಸ್ನೊಂದಿಗೆ ಬುರ್ಕಿನಾ ಫಾಸೋ, ತಜಕಿಸ್ತಾನ್ ಜತೆ ಹಂಚಿಕೊಂಡಿದೆ.
ಜಗತ್ತಿನ ಕಳಪೆ ಪಾಸ್‌ಪೋರ್ಟ್‌ಗಳು ಯಾವುವು?
ಅಫ್ಘಾನಿಸ್ತಾನ- 26
ಇರಾಕ್- 28
ಸಿರಿಯಾ- 29
ಪಾಕಿಸ್ತಾನ 31,
ಯೆಮನ್- 33,
ಸೊಮೇಲಿಯಾ- 34
ಲಿಬಿಯಾ- 37
ನೇಪಾಳ ಪ್ಯಾಲೆಸ್ಟೀನ್ ಪ್ರದೇಶ- 37
ಉತ್ತರ ಕೊರಿಯಾ- 39
ಕೊಸೋವೊ
ಬಾಂಗ್ಲಾದೇಶ-40.