2022ರ ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಮಹಿಳಾ ಕ್ರಿಕೆಟ್‌

ಅಂತಾರಾಷ್ಟ್ರೀಯ ಸುದ್ದಿಗಳು ರಾಷ್ಟೀಯ ಸುದ್ದಿಗಳು

  • ಮುಂದಿನ ವರ್ಷ ಇಲ್ಲಿ ನಿಗದಿಯಾಗಿರುವ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಮೊದಲ ಬಾರಿ ಮಹಿಳಾ ಕ್ರಿಕೆಟ್‌ಅನ್ನು ಆಡಿಸಲಾಗುತ್ತಿದ್ದು, ಭಾರತ ತಂಡಕ್ಕೆ ಆರಂಭಿಕ ಪಂದ್ಯದಲ್ಲಿ ಆಸ್ಟ್ರೇಲಿಯಾ ಸವಾಲು ಎದುರಾಗಿದೆ.
  • ಉಭಯ ತಂಡಗಳ ನಡುವೆ ಜುಲೈ 29ರಂದು ಈ ಪಂದ್ಯ ನಡೆಯಲಿದ್ದು, ಆಗಸ್ಟ್ ಏಳರಂದು ಫೈನಲ್ ಹಣಾಹಣಿ ನಿಗದಿಯಾಗಿದೆ ಎಂದು ಟೂರ್ನಿಯ ಆಯೋಜಕರು ಶುಕ್ರವಾರ ತಿಳಿಸಿದ್ದಾರೆ.
  • ಟಿ20 ಮಾದರಿಯೊಂದಿಗೆ ಮಹಿಳಾ ಕ್ರಿಕೆಟ್ ಕಾಮನ್‌ವೆಲ್ತ್ ಗೇಮ್ಸ್‌ಗೆ ಪದಾರ್ಪಣೆ ಮಾಡುತ್ತಿದೆ. ಕ್ವಾಲಾಲಂಪುರದಲ್ಲಿ ನಡೆದ 1998ರ ಆವೃತ್ತಿಯಲ್ಲಿ ಕೊನೆಯ ಬಾರಿ ಪುರುಷರ ಕ್ರಿಕೆಟ್‌ಅನ್ನು ಆಡಿಸಲಾಗಿತ್ತು.  • ‌‘2022ರ ಜುಲೈ 2ರಿಂದ ಎಡ್ಜ್‌ಬಾಸ್ಟನ್ ಮಹಿಳಾ ಟಿ20 ಪಂದ್ಯಗಳು ನಡೆಯಲಿದ್ದು, ಆಗಸ್ಟ್ 7ರಂದು ಕಂಚು ಮತ್ತು ಚಿನ್ನದ ಪದಕದ ಸುತ್ತಿನ ಪಂದ್ಯಗಳು ನಿಗದಿಯಾಗಿವೆ‘ ಎಂದು ಇಂಗ್ಲೆಂಡ್‌ ಮತ್ತು ವೇಲ್ಸ್ ಕ್ರಿಕೆಟ್‌ ಮಂಡಳಿ (ಇಸಿಬಿ) ತಿಳಿಸಿದೆ.
  • ವೇಳಾಪಟ್ಟಿಯ ಪ್ರಕಾರ ಮೊದಲ ಪಂದ್ಯವು ಜುಲೈ 29ರಂದು ಆಸ್ಟ್ರೇಲಿಯಾ ತಂಡವನ್ನು ಭಾರತ ಎದುರಿಸಲಿದೆ. ಇದೇ ದಿನಾಂಕದಂದು ಪಾಕಿಸ್ತಾನವು ವೆಸ್ಟ್‌ ಇಂಡೀಸ್‌ನ ಬಾರ್ಬಡಾಸ್‌ ವಿರುದ್ಧ ಆಡಲಿದೆ.
  • ಜುಲೈ 31ರಂದು ಪಾಕಿಸ್ತಾನ ವಿರುದ್ಧ ಭಾರತ ಸೆಣಸಲಿದ್ದು, ಆಗಸ್ಟ್ 3ರಂದು ಪಾಕಿಸ್ತಾನ–ಆಸ್ಟ್ರೇಲಿಯಾ ಪಂದ್ಯ ನಡೆಯಲಿದೆ.

Leave a Reply

Your email address will not be published. Required fields are marked *