ಅಂತರರಾಷ್ಟ್ರೀಯ ಪರ್ವತ ದಿನವನ್ನು ಪ್ರತಿ ವರ್ಷ ಡಿಸೆಂಬರ್ 11 ರಂದು ಇಡೀ ವಿಶ್ವದಲ್ಲೇ ಆಚರಿಸಲಾಗುತ್ತದೆ. ಈ ದಿನದ ಮುಖ್ಯ ಉದ್ದೇಶ( Theme) ಸುಸ್ಥಿರ ಪರ್ವತ ಅಭಿವೃದ್ಧಿಯನ್ನು ಉತ್ತೇಜಿಸುವುದಾಗಿದೆ. ಇದನ್ನು ವಿಶ್ವಸಂಸ್ಥೆಯ ಸಾಮಾನ್ಯ ಸಭೆ (UNGA) ಗೊತ್ತುಪಡಿಸಿದೆ.
ಈ ದಿನವು ಪ್ರಪಂಚದ ಆಕರ್ಷಕ ಭೂದೃಶ್ಯಗಳ ಸಂಕೇತವಾಗಿದೆ. ಹಿಮದಿಂದ ಆವೃತವಾದ ಹಿಮಾಲಯದಿಂದ ಹಚ್ಚ ಹಸಿರಿನ ಪರ್ವತಗಳವರೆಗೆ, ಪ್ರತಿಯೊಂದು ಪರ್ವತವು ತನ್ನದೇ ಆದ ರೀತಿಯಲ್ಲಿ ವಿಶೇಷವಾಗಿದೆ ಮತ್ತು ವಿವಿಧ ಪ್ರಾಣಿಗಳು ಮತ್ತು ಸಸ್ಯಗಳಿಗೆ ನೆಲೆಯಾಗಿದೆ.
ವಿಶ್ವ ಸಂಸ್ಥೆ ಪ್ರಕಾರ ಇದನ್ನು ಪ್ರತಿವರ್ಷ ಆಚರಿಸಲಾಗುತ್ತದೆ ಏಕೆಂದರೆ ಪರ್ವತ ನಮ್ಮ ಪ್ರಕೃತಿಗೆ ಎಷ್ಟು ಮುಖ್ಯ,ಅದು ನಮ್ಮ ಜನ ಜೀವನದ ಮೇಲೆ ಎಷ್ಟು ಪರಿಣಾಮ ಬೀರುತ್ತದೆ ಮತ್ತು ಈ ಪರ್ವತ ಸಂಪತ್ತನ್ನು ಸಂರಕ್ಷಿಸಲು ಜನ ಜಾಗೃತಿ ಮೂಡಿಸಲು ಇದನ್ನು ಆಚರಿಸಲಾಗುತ್ತದೆ.
ಪರ್ವತದಲ್ಲಿ ಅನೇಕ ಗಿಡ ಮರಗಳು,ಪ್ರಾಣಿಗಳು ,ಪಕ್ಷಿಗಳು ವಾಸಿಸುತ್ತವೆ ಮತ್ತು ಇದು ವಾತಾವರಣ ಬದಲಾವಣೆಗೂ ಕಾರಣವಾಗುತ್ತದೆ ಅದಕ್ಕಾಗಿ ಇದನ್ನು ರಕ್ಷಿಸ ಬೇಕೆಂದು ವಿಶ್ವ ಸಂಸ್ಥೆ ಇದನ್ನೂ ಆಚರಿಸುತ್ತದೆ.
ಅಂತಾರಾಷ್ಟ್ರೀಯ ಪರ್ವತ ದಿನದ ವಿಷಯ ಉದ್ದೇಶ:
ಸುಸ್ಥಿರ ಪರ್ವತ ಪ್ರವಾಸೋದ್ಯಮ”(Sustainable Mountain Tourism)
ಅಂತಾರಾಷ್ಟ್ರೀಯ ಪರ್ವತ ದಿನದ ಮಹತ್ವ :
- ಯುನ್(UN) ಪ್ರಕಾರ ಈ ಪರ್ವತದ ಅಂಚಿನಲ್ಲಿ ಅನೇಕ ಜಿವಜಂತುಗಳು ಜೀವಿಸುತ್ತವೆ. ಶೇಕಡಾ 15ರಷ್ಟು ಜನ ಈ ಪರ್ವತದ ಸ್ಥಳದಲ್ಲೀ ವಾಸಿಸುತ್ತವೆ.
- ಈ ಪರ್ವತಗಳು ನಾಶವಾಗುತ್ತ ಹೋದರೆ ಪ್ರಕೃತಿಯಲ್ಲಿ ಬಹಳಷ್ಟು ಬದಲಾವಣೆಗಳಾಗುತ್ತವೆ ಎಂದು ಹೇಳಿದೆ.
- ಅದಕ್ಕಾಗಿ ಇದನ್ನು ರಕ್ಷಿಸಬೇಕೆಂಬ ನಿಟ್ಟಿನಲ್ಲಿ ಇದನ್ನು 2003 ರಿಂದ ಡಿಸೆಂಬರ್ 11ರಂದು ಅಂತಾರಾಷ್ಟ್ರೀಯ ಪರ್ವತ ದಿನವನ್ನಾಗಿ ಆಚರಿಸಲಾಗುತ್ತದೆ.
ಅಂತಾರಾಷ್ಟ್ರೀಯ ಪರ್ವತ ದಿನಕ್ಕೆ ಸಂಬಂದಿಸಿದ ಸಾಮಾನ್ಯ ಜ್ಞಾನ :
- ದಶರತ್ ಮಾಂಜಿ – ಪರ್ವತ ಮನುಷ್ಯ
- “ದಿ ಲಿವಿಂಗ್ ಮೌಂಟೇನ್: ಎ ಫೇಬಲ್ ಫಾರ್ ಅವರ್ ಟೈಮ್ಸ್” – ಅಮಿತಾವ್ ಘೋಷ್
- ಡಹ್ರಾಡೂನ್‌ನಲ್ಲಿ ನಡೆದ 9ನೇ ಸುಸ್ಥಿರ ಪರ್ವತ ಅಭಿವೃದ್ಧಿ ಶೃಂಗಸಭೆ ನಡೆದಿದೆ.
- ಭಾರತೀಯ ಪರ್ವತಾರೋಹಣ ಫೌಂಡೇಶನ್‌ನ ಮೊದಲನೇ ಮಹಿಳಾ ಅಧ್ಯಕ್ಷೆಯಾದ ಹರ್ಷವಂತಿ ಬಿಶ್ತ್
- ರಾಷ್ಟ್ರೀಯ ಪರ್ವತಾರೋಹಣ ದಿನ – 01 ಆಗಸ್ಟ್
- ಶೆಹ್ರೋಜ್ ಕಾಶಿಫ್ ಕೆ2 ಅನ್ನು ಅಳೆಯುವ ವಿಶ್ವದ ಅತ್ಯಂತ ಕಿರಿಯ ಪರ್ವತಾರೋಹಿಯಾದರು.
- ಆರು ಖಂಡಗಳಲ್ಲಿ ಆರು ಪರ್ವತ ಶಿಖರಗಳನ್ನು ಏರಿದ ವಿಶ್ವದ ಮೊದಲ ಮತ್ತು ಕಿರಿಯ ಭಾರತೀಯ ಬುಡಕಟ್ಟು ಮಹಿಳೆಯರು — ಮಾಲವತ್ ಪೂರ್ಣಾ