IOCL Recruitment 2021: ಇಂಡಿಯನ್ ಆಯಿಲ್ ಕಾರ್ಪೋರೇಷನ್ ಲಿಮಿಟೆಡ್(Indian Oil Corporation Limited) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 527 ಟೆಕ್ನಿಕಲ್(Technical) ಮತ್ತು ನಾನ್-ಟೆಕ್ನಿಕಲ್ ಅಪ್ರೆಂಟಿಸ್(Non-Technical Apprentice) ಹುದ್ದೆಗಳು ಖಾಲಿ ಇವೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಇಂಡಿಯನ್ ಆಯಿಲ್ ಕಾರ್ಪೊರೇಷನ್(Indian Oil Corporation)ನ ಅಧಿಕೃತ ವೆಬ್ಸೈಟ್(Official Website) iocl.com ಗೆ ಭೇಟಿ ನೀಡಬಹುದಾಗಿದೆ.
IOCL Recruitment 2021 ಹುದ್ದೆಯ ಮಾಹಿತಿ:
- ಪಶ್ಚಿಮ ಬಂಗಾಳ: 236
- ಬಿಹಾರ: 68
- ಒಡಿಶಾ: 69
- ಜಾರ್ಖಂಡ್: 35
- ಅಸ್ಸಾಂ: 119
IOCL Recruitment 2021 ವಯೋಮಿತಿ:
-
- ಸಾಮಾನ್ಯ ಮತ್ತು EWS ವರ್ಗದ ಅಭ್ಯರ್ಥಿಗಳ ವಯಸ್ಸು ಅಕ್ಟೋಬರ್ 31 ಕ್ಕೆ 18-24 ವರ್ಷದೊಳಗಿರಬೇಕು.
- SC/ST/OBC/ PWD ಅಭ್ಯರ್ಥಿಗಳಿಗೆ ಸರ್ಕಾರದ ನಿಯಮಾನುಸಾರ ವಯೋಮಿತಿ ಸಡಿಲಿಕೆ ನೀಡಲಾಗಿದೆ.
IOCL Recruitment 2021 ವಿದ್ಯಾರ್ಹತೆ:
- ಟೆಕ್ನಿಕಲ್ ಮತ್ತು ನಾನ್ ಟೆಕ್ನಿಕಲ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಸರ್ಕಾರದಿಂದ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಸಂಸ್ಥೆಯಿಂದ ಐಟಿಐ/ಡಿಪ್ಲೋಮಾ/ 12ನೇ ತರಗತಿ ಓದಿರಬೇಕು.
- ಅಪ್ರೆಂಟಿಸ್ಶಿಪ್ ತರಬೇತಿಯ ಅವಧಿಯು 12 ತಿಂಗಳುಗಳಾಗಿರುತ್ತದೆ. ಟ್ರೇಡ್ ಅಪ್ರೆಂಟಿಸ್ ಡೇಟಾ ಎಂಟ್ರಿ ಆಪರೇಟರ್(ಫ್ರೆಶರ್ ಅಪ್ರೆಂಟಿಸ್) ಗಳಿಗೆ 15 ತಿಂಗಳ ತರಬೇತಿ ಇರುತ್ತದೆ.
- ಟ್ರೇಡ್ ಅಪ್ರೆಂಟಿಸ್ ರೀಟೆಲ್ ಸೇಲ್ಸ್ ಅಸೋಸಿಯೇಟ್ಗಳಿಗೆ (ಫ್ರೆಶರ್) 14 ತಿಂಗಳ ತರಬೇತಿ ನೀಡಲಾಗುತ್ತದೆ ಎಂದು ಅಧಿಸೂಚನೆಯಲ್ಲಿ ಹೇಳಲಾಗಿದೆ.
ಇದನ್ನು ಓದಿರಿ:BBMP Recruitment 2021: PUC, Diploma ಆದವರಿಗೆ ಬಿಬಿಎಂಪಿಯಲ್ಲಿ ಉದ್ಯೋಗ
IOCL Recruitment 2021 ಆಯ್ಕೆ ಪ್ರಕ್ರಿಯೆ:
-
- ಟೆಕ್ನಿಕಲ್ ಮತ್ತು ನಾನ್ ಟೆಕ್ನಿಕಲ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ ನೀಡಲಾಗುತ್ತದೆ.
- ಡಿಸೆಂಬರ್ 19ರಂದು ಪರೀಕ್ಷೆ ನಡೆಯಲಿದ್ದು, ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಪರೀಕ್ಷೆ ಬರೆಯಬಹುದಾಗಿದೆ.
IOCL Recruitment 2021 ದಿನಾಂಕ:
- ಅರ್ಜಿ ಸಲ್ಲಿಸಲು ಆರಂಭ ದಿನ:07/11/2021
- ಅರ್ಜಿ ಸಲ್ಲಿಸಲು ಕೊನೆ ದಿನ :04/12/2021
IOCL Recruitment 2021 ಲಿಂಕ್ :