ಸಾಹಿತ್ಯ ಕ್ಷೇತ್ರದಲ್ಲಿ ಮಾಡಿದ ಸಾಧನೆಗಾಗಿ ನೀಡಲಾಗುವ ಭಾರತದ ಅತ್ಯುನ್ನತ ಗೌರವವಾದ ಜ್ಞಾನಪೀಠ ಪ್ರಶಸ್ತಿಗೆ ಅಸ್ಸಾಂನ ಕವಿ ನೀಲ್ಮಣಿ ಫೂಕನ್ ಹಾಗೂ ಕೊಂಕಣಿ ಸಣ್ಣ ಕಥೆಗಾರ ಮತ್ತು ಕಾದಂಬರಿಕಾರ ದಾಮೋದರ್ ಮೌಜೊ ಪಾತ್ರರಾಗಿದ್ದಾರೆ. ಕೊಂಕಣಿ ಸಾಹಿತ್ಯಕ್ಕಾಗಿ ಜ್ಞಾನಪೀಠ ಪ್ರಶಸ್ತಿಯನ್ನು ಪಡೆಯುತ್ತಿರುವ 2ನೇ ಸಾಹಿತಿ ಎಂಬ ಹೆಗ್ಗಳಿಕೆಗೆ ದಾಮೋದರ್ ಮೌಜೊ ಪಾತ್ರರಾಗಿದ್ದಾರೆ.
ಜ್ಞಾನಪೀಠ ಪ್ರಶಸ್ತಿ ವಿಜೇತರು ಹಿನ್ನೆಲೆ :
- ಜ್ಞಾನಪೀಠ ಪ್ರಶಸ್ತಿ ಭಾರತದ ಸಾಹಿತಿಗಳಿಗೆ ಸಲ್ಲುವ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿ.
- ಈ ಪ್ರಶಸ್ತಿಯು ಭಾರತದ ಸಂವಿಧಾನದ ಎಂಟನೆ ಅನುಚ್ಛೇದದಲ್ಲಿ ಉಲ್ಲೇಖವಾಗಿರುವ ಭಾಷೆಗಳಲ್ಲಿ ಅತ್ಯುತ್ತಮ ಸಾಹಿತ್ಯ ಕೃತಿಯನ್ನು ಅಥವಾ ಸಮಗ್ರ ಸಾಹಿತ್ಯದ ಕೊಡುಗೆಯನ್ನು ನೀಡಿದ ಭಾರತೀಯ ನಾಗರಿಕನಿಗೆ ಲಭಿಸುವುದು.
- ಸಾಹು ಜೈನ್ ಪರಿವಾರದವರು, ಈ ಪ್ರಶಸ್ತಿಯನ್ನು ಮೇ 22, 1961 ರಲ್ಲಿ ಸ್ಥಾಪಿಸಿದರು. ಈ ಪ್ರಶಸ್ತಿಯನ್ನು ಪ್ರಪ್ರಥಮವಾಗಿ 1965ರಲ್ಲಿ ಮಲೆಯಾಳಂ ಲೇಖಕ ಜಿ. ಶಂಕರ ಕುರುಪರಿಗೆ ಪ್ರದಾನ ಮಾಡಲಾಯಿತು.
- ವಿಜೇತರಿಗೆ ಪ್ರಶಸ್ತಿ ಫಲಕ, 11 ಲಕ್ಷ ರೂಪಾಯಿ ಚೆಕ್ ಹಾಗೂ ವಾಗ್ದೇವಿಯ ಕಂಚಿನ ವಿಗ್ರಹವನ್ನು ನೀಡಿ ಗೌರವಿಸಲಾಗುವುದು.
- ಈ ಪ್ರಶಸ್ತಿಯನ್ನು ನೀಡುವವರು ಜ್ಞಾನಪೀಠ ಟ್ರಸ್ಟ್. ಟೈಂಸ್ ಆಫ್ ಇಂಡಿಯಾದ ಒಡೆತನವನ್ನು ಹೊಂದಿರುವ ಜೈನ್ ಕುಟುಂಬ ಜ್ಞಾನಪೀಠ ಟ್ರಸ್ಟ್ ನ ಸ್ಥಾಪಕರು. ಈಗಲೂ ಅದರ ಸದಸ್ಯರಲ್ಲಿ ಹೆಚ್ಚಿನವರು ಈ ಕುಟುಂಬಕ್ಕೆ ಸೇರಿದ್ದಾರೆ.
- 1982 ರಿಂದ, ಈ ಪ್ರಶಸ್ತಿಯನ್ನು ಭಾರತೀಯ ಸಾಹಿತ್ಯಕ್ಕೆ ಸಮಗ್ರ ಕೊಡುಗೆಯನ್ನು ನೀಡಿದ ಲೇಖಕರಿಗೆ ಸಂದಾಯವಾಗುತ್ತಿದೆ.
- ಈವರೆಗೆ ಹಿಂದಿ ಸಾಹಿತಿಗಳು ಹನ್ನೊಂದು ಪ್ರಶಸ್ತಿಗಳನ್ನು ಪಡೆದು ಅತಿ ಹೆಚ್ಚು ಜ್ಞಾನಪೀಠ ಪ್ರಶಸ್ತಿ ಪಡೆದ ಭಾಷೆಯನ್ನಾಗಿ ಮಾಡಿದ್ದಾರೆ.
- ಕನ್ನಡ ಭಾಷೆಯು ಎಂಟು ಪ್ರಶಸ್ತಿಯನ್ನು ಪಡೆದು ಎರಡನೆ ಸ್ಥಾನದಲ್ಲಿದೆ. 1982ರಿಂದ ಒಂದು ಕೃತಿಯ ಬದಲಿಗೆ ಸಮಗ್ರ ಸಾಹಿತ್ಯದ ಕೊಡುಗೆಯನ್ನು ಗಮನಿಸಿ ನೀಡಲಾಗುತ್ತಿದೆ.
- ಈವರೆಗೆ ಎಂಟು ಕನ್ನಡ ಸಾಹಿತಿಗಳು ಜ್ಞಾನಪೀಠ ಪ್ರಶಸ್ತಿಯಿಂದ ಪುರಸ್ಕೃತಗೊಂಡು, ಕನ್ನಡವನ್ನು ಅತೀ ಹೆಚ್ಚು ಜ್ಞಾನಪೀಠ ಪ್ರಶಸ್ತಿ ಪಡೆದ ಭಾಷೆಯನ್ನಾಗಿ ಮಾಡಿದ್ದಾರೆ.
ಜ್ಞಾನಪೀಠ ಪ್ರಶಸ್ತಿ ವಿಜೇತರು 1965-2021:
1965 : ಜಿ. ಶಂಕರ ಕುರುಪ್ – ಮಲಯಾಳಂ – ಓಡಕ್ತುಳಲ್
1966 : ತಾರಾಶಂಕರ ಬಂದೋಪಾಧ್ಯಾಯ – ಬೆಂಗಾಲಿ – ಗಣದೇವತಾ
1967 : ಉಮಾಶಂಕರ್ ಜೋಶಿ – ಗುಜರಾತಿ – ನಿಶಿತಾ
1967 : ಕುವೆಂಪು – ಕನ್ನಡ – ಶ್ರೀ ರಾಮಾಯಣ ದರ್ಶನಂ
1968 : ಸುಮಿತ್ರಾನಂದನ ಪಂತ್ – ಹಿಂದಿ – ಚಿದಂಬರಾ
1969 : ಫಿರಾಕ್ ಗೋರಕ್ ಪುರಿ – ಉರ್ದು – ಗುಲ್-ಎ-ನಗ್ಮಾ
1970 : ವಿಶ್ವನಾಥ ಸತ್ಯನಾರಾಯಣ – ತೆಲುಗು – ರಾಮಾಯಣ ಕಲ್ಪವೃಕ್ಷಮು
1971 : ಬಿಷ್ಣು ಡೆ – ಬೆಂಗಾಲಿ – ಸ್ಮೃತಿ ಸತ್ತಾ ಭವಿಷ್ಯತ್
1972 : ರಾಮ್‌ಧಾರಿ ಸಿಂಗ್ ದಿನಕರ್ – ಹಿಂದಿ – ಊರ್ವಶಿ
1973 : ದ. ರಾ. ಬೇಂದ್ರೆ – ಕನ್ನಡ – ನಾಕುತಂತಿ
1973 : ಗೋಪಿನಾಥ ಮೊಹಾಂತಿ – ಒಡಿಯಾ – ಮತಿಮತಾಲ್
1974 : ವಿ. ಎಸ್. ಖಾಂಡೇಕರ್ – ಮರಾಠಿ – ಯಯಾತಿ
1975 : ಪಿ. ವಿ. ಅಖಿಲನ್ – ತಮಿಳು – ಚಿತ್ರಪ್ಪಾವೈ
1976 : ಆಶಾಪೂರ್ಣ ದೇವಿ – ಬೆಂಗಾಲಿ – ಪ್ರಥಮ್ ಪ್ರತಿಶೃತಿ
1977 : ಕೆ. ಶಿವರಾಮ ಕಾರಂತ – ಕನ್ನಡ – ಮೂಕಜ್ಜಿಯ ಕನಸುಗಳು
1978 : ಸಚ್ಚಿದಾನಂದ ವಾತ್ಸಾಯನ – ಹಿಂದಿ – ಕಿತ್ನೀ ನಾವೋಂ ಮೇಂ ಕಿತ್ನೀ ಬಾರ್
1979 : ಬೀರೇಂದ್ರ ಕುಮಾರ್ ಭಟ್ಟಾಚಾರ್ಯ – ಅಸ್ಸಾಮಿ – ಮೃತ್ಯುಂಜಯ್
1980 : ಎಸ್. ಕೆ. ಪೊಟ್ಟೆಕ್ಕಾಟ್ – ಮಲಯಾಳಂ – ಒರು ದೇಸದಿಂಟೆ ಕಥಾ
1981 : ಅಮೃತಾ ಪ್ರೀತಮ್ – ಪಂಜಾಬಿ – ಕಾಗಜ್ ತೆ ಕ್ಯಾನ್ವಾಸ್
1982 : ಮಹಾದೇವಿ ವರ್ಮಾ – ಹಿಂದಿ – ಸಮಗ್ರ ಸಾಹಿತ್ಯ
1983 : ಮಾಸ್ತಿ ವೆಂಕಟೇಶ ಅಯ್ಯಂಗಾರ್ – ಕನ್ನಡ ಚಿಕ್ಕವೀರ ರಾಜೇಂದ್ರ
1984 : ತಕಳಿ ಶಿವಶಂಕರ ಪಿಳ್ಳೈ – ಮಲಯಾಳಂ – ಸಮಗ್ರ ಸಾಹಿತ್ಯ
1985 : ಪನ್ನಾಲಾಲ್ ಪಟೇಲ್ – ಗುಜರಾತಿ – ಸಮಗ್ರ ಸಾಹಿತ್ಯ
1986 : ಸಚ್ಚಿದಾನಂದ ರಾವುತರಾಯ್ – ಒಡಿಯಾ – ಸಮಗ್ರ ಸಾಹಿತ್ಯ
1987 : ವಿ. ವಿ. ಶಿರ್ವಾಡ್ಕರ್ – ಮರಾಠಿ – ಸಮಗ್ರ ಸಾಹಿತ್ಯ
1988 : ಸಿ. ನಾರಾಯಣ ರೆಡ್ಡಿ – ತೆಲುಗು – ಸಮಗ್ರ ಸಾಹಿತ್ಯ
1989 : ಕುರ್ರಾತುಲೈನ್ ಹೈದರ್ – ಉರ್ದು – ಸಮಗ್ರ ಸಾಹಿತ್ಯ
1990 : ವಿ. ಕೃ. ಗೋಕಾಕ – ಕನ್ನಡ – ಸಮಗ್ರ ಸಾಹಿತ್ಯ
1991 : ಸುಭಾಷ್ ಮುಖ್ಯೋಪಾಧ್ಯಾಯ – ಬೆಂಗಾಲಿ – ಸಮಗ್ರ ಸಾಹಿತ್ಯ
1992 : ನರೇಶ್ ಮೆಹ್ತಾ – ಹಿಂದಿ – ಸಮಗ್ರ ಸಾಹಿತ್ಯ
1993 : ಸೀತಾಕಾಂತ್ ಮಹಾಪಾತ್ರ – ಒಡಿಯಾ – ಸಮಗ್ರ ಸಾಹಿತ್ಯ
1994 : ಯು. ಆರ್. ಅನಂತಮೂರ್ತಿ – ಕನ್ನಡ – ಸಮಗ್ರ ಸಾಹಿತ್ಯ
1995 : ಎಂ. ಟಿ. ವಾಸುದೇವನ್ ನಾಯರ್ – ಮಲಯಾಳಂ – ಸಮಗ್ರ ಸಾಹಿತ್ಯ
1996 : ಮಹಾಶ್ವೇತಾ ದೇವಿ – ಬೆಂಗಾಲಿ – ಸಮಗ್ರ ಸಾಹಿತ್ಯ
1997 : ಅಲಿ ಸರ್ದಾರ್ ಜಾಫ್ರಿ – ಉರ್ದು – ಸಮಗ್ರ ಸಾಹಿತ್ಯ
1998 : ಗಿರೀಶ್ ಕಾರ್ನಾಡ್ – ಕನ್ನಡ – ಸಮಗ್ರ ಸಾಹಿತ್ಯ
1999 : ನಿರ್ಮಲ್ ವರ್ಮ – ಹಿಂದಿ – ಸಮಗ್ರ ಸಾಹಿತ್ಯ
1999 : ಗುರುದಯಾಳ್ ಸಿಂಗ್ – ಪಂಜಾಬಿ – ಸಮಗ್ರ ಸಾಹಿತ್ಯ
2000 : ಇಂದಿರಾ ಗೋಸ್ವಾಮಿ – ಅಸ್ಸಾಮಿ – ಸಮಗ್ರ ಸಾಹಿತ್ಯ
2001 : ರಾಜೇಂದ್ರ ಕೆ. ಶಾ – ಗುಜರಾತಿ – ಸಮಗ್ರ ಸಾಹಿತ್ಯ
2002 : ಡಿ. ಜಯಕಾಂತನ್ – ತಮಿಳು – ಸಮಗ್ರ ಸಾಹಿತ್ಯ
2003 : ವಿಂದಾ ಕರಂದೀಕರ್ – ಮರಾಠಿ – ಸಮಗ್ರ ಸಾಹಿತ್ಯ
2004 : ರೆಹಮಾನ್ ರಾಹಿ – ಕಾಶ್ಮೀರಿ – ಸಮಗ್ರ ಸಾಹಿತ್ಯ
2005 : ರವೀಂದ್ರ ಕೇಳೇಕರ್ – ಕೊಂಕಣಿ – ಸಮಗ್ರ ಸಾಹಿತ್ಯ
2006 : ಸತ್ಯವ್ರತ ಶಾಸ್ತ್ರಿ – ಸಂಸ್ಕೃತ – ಸಮಗ್ರ ಸಾಹಿತ್ಯ
2007 : ಒ. ಎನ್. ವಿ. ಕುರುಪ್ – ಮಲಯಾಳಂ – ಸಮಗ್ರ ಸಾಹಿತ್ಯ
2008 : ಅಖ್ಲಾಕ್ ಮೊಹಮ್ಮದ್ ಖಾನ್ ಶಹರ್ಯಾರ್ – ಉರ್ದು – ಸಮಗ್ರ ಸಾಹಿತ್ಯ
2009 : ಅಮರ್ ಕಾಂತ್ – ಹಿಂದಿ – ಸಮಗ್ರ ಸಾಹಿತ್ಯ
2009 : ಶ್ರೀ ಲಾಲ್ ಶುಕ್ಲ – ಹಿಂದಿ – ಸಮಗ್ರ ಸಾಹಿತ್ಯ
2010 : ಚಂದ್ರಶೇಖರ ಕಂಬಾರ – ಕನ್ನಡ – ಸಮಗ್ರ ಸಾಹಿತ್ಯ
2011 : ಪ್ರತಿಭಾ ರೇ – ಒಡಿಯಾ – ಸಮಗ್ರ ಸಾಹಿತ್ಯ
2012 : ರಾವೂರಿ ಭರದ್ವಾಜ – ತೆಲುಗು – ಸಮಗ್ರ ಸಾಹಿತ್ಯ
2013 : ಕೇದಾರನಾಥ್ ಸಿಂಗ್ – ಹಿಂದಿ – ಸಮಗ್ರ ಸಾಹಿತ್ಯ
2014 : ಭಾಲಚಂದ್ರ ನೇಮಾಡೆ – ಮರಾಠಿ – ಸಮಗ್ರ ಸಾಹಿತ್ಯ
2015 : ರಘುವೀರ್ ಚೌಧರಿ – ಗುಜರಾತಿ – ಸಮಗ್ರ ಸಾಹಿತ್ಯ
2016 : ಶಂಖ ಘೋಷ್ – ಬೆಂಗಾಲಿ – ಸಮಗ್ರ ಸಾಹಿತ್ಯ
2017 : ಕೃಷ್ಣಾ ಸೋಬ್ತಿ – ಹಿಂದಿ – ಸಮಗ್ರ ಸಾಹಿತ್ಯ
2018 : ಅಮಿತಾವ್ ಘೋಷ್ – ಇಂಗ್ಲಿಷ್ – ಸಮಗ್ರ ಸಾಹಿತ್ಯ
2019 : ಅಕ್ಕಿತಂ ಅಚ್ಯುತನ್ ನಂಬೂದಿರಿ – ಮಲಯಾಳಂ – ಸಮಗ್ರ ಸಾಹಿತ್ಯ
2020:ನೀಲ್ಮಣಿ ಫುಕನ್-ಅಸ್ಸಾಮೀಸ್
2021:ದಾಮೋದರ ಮಾವಜೊ-ಕೊಂಕಣಿ-