ಚೈಲ್ಡ್ ಪೋರ್ನೋಗ್ರಫಿ: ಕೇರಳ ಮೊದಲು, ಕರ್ನಾಟಕ ಕ್ಕೆ 4 ನೇ ಸ್ಥಾನ

ರಾಷ್ಟೀಯ ಸುದ್ದಿಗಳು

ನಮ್ಮ ದೇಶದಲ್ಲಿ 2017 ರಿಂದ 2019ರ ಅವಧಿಯಲ್ಲಿ ನಡೆದಿರುವ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಮತ್ತು ಚಿತ್ರೀಕರಣ ಪ್ರಕರಣದಲ್ಲಿ ಕೇರಳ ಮತ್ತು ಉತ್ತರಪ್ರದೇಶದಲ್ಲಿ ಶೇ 77.45ರಷ್ಟು ಪಾಲು ಹೊಂದಿವೆ ಎಂದುಇತ್ತೀಚಿನ ವರದಿ ಹೇಳಿದೆ.

ಈ ಅವಧಿಯಲ್ಲಿ ರಾಷ್ಟ್ರದಾದ್ಯಂತ ಚೈಲ್ಡ್ ಪೋರ್ನೋಗ್ರಫಿ ಪ್ರಕರಣಗಳ ಸಂಖ್ಯೆ ಕೂಡ 14 ಪಟ್ಟು ಏರಿಕೆಯಾಗಿದೆ.
ನಂತರದ ಸ್ಥಾನದಲ್ಲಿ ಮಧ್ಯಪ್ರದೇಶ, ಕರ್ನಾಟಕ ಮತ್ತು ಪಶ್ಚಿಮ ಬಂಗಾಳ ಕಂಡು ಬಂದಿದ್ದು, ಇಂಟರ್‌ನೆಟ್‌ನಲ್ಲಿ ಮಕ್ಕಳ ಮೇಲೆ ದೌರ್ಜನ್ಯ ಹೆಚ್ಚಿನ ಸಂಖ್ಯೆಯಲ್ಲಿ ನಡೆಯುತ್ತಿದೆ ಎಂದು ರಾಜ್ಯಸಭೆಯಲ್ಲಿಮಹಿಳಾ ಮತ್ತು ಮಕ್ಕಳ ಸಚಿವಾಲಯ ಈ ಮಾಹಿತಿ ಒದಗಿಸಿದೆ.

2017ರಲ್ಲಿ 7 ಇದ್ದ ಪ್ರಕರಣಗಳ ಸಂಖ್ಯೆ 2018ರಲ್ಲಿ 44 ಮತ್ತು 2019ರಲ್ಲಿ 102ಕ್ಕೆ ಏರಿಕೆಯಾಗಿದೆ ಎಂದು ಸಚಿವಾಲಯ ಹೇಳಿದೆ.
ಕೇರಳದಲ್ಲಿ ಅತಿಹೆಚ್ಚು ಅಂದರೆ, 45 ಮತ್ತು ಉತ್ತರ ಪ್ರದೇಶದಲ್ಲಿ 34 ಹಾಗೂ ಮಧ್ಯ ಪ್ರದೇಶದಲ್ಲಿ 10 ಪ್ರಕರಣಗಳು ವರದಿಯಾಗಿವೆ
.

ರಾಜ್ಯಸಭೆಗೆ ಲಿಖಿತ ಉತ್ತರ ನೀಡಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ, ಮಕ್ಕಳ ವಿರುದ್ಧ ಲೈಂಗಿಕ ದೌರ್ಜನ್ಯ ತಡೆಯಲು ಸರ್ಕಾರ ಪೋಕ್ಸೊ ಕಾಯ್ದೆ ಜಾರಿಗೆ ತಂದಿದೆ, ಅದರ ಮೂಲಕ ಮಕ್ಕಳ ಹಕ್ಕುಗಳ ರಕ್ಷಣೆ ಮತ್ತು ದೌರ್ಜನ್ಯ ತಡೆಗೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ.
ಅಲ್ಲದೆ, ದೂರಸಂಪರ್ಕ ಸಚಿವಾಲಯ ಕೂಡ ಎಲ್ಲ ಇಂಟರ್‌ನೆಟ್ ಸೇವೆ ಪೂರೈಕೆದಾರರಿಗೆ ಚೈಲ್ಡ್ ಪೋರ್ನೋಗ್ರಫಿ ತಡೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದೆ.
ಜತೆಗೆ ಇಮೇಲ್, ಎಸ್ಎಂಎಸ್ ಮತ್ತು ವಿವಿಧ ಮಾಧ್ಯಮಗಳ ಮೂಲಕವೂ ಜಾಗೃತಿ ಮೂಡಿಸಲು ದೂರಸಂಪರ್ಕ ಸಚಿವಾಲಯ ಸೂಚಿಸಿದೆ.

Leave a Reply

Your email address will not be published. Required fields are marked *