RDPR Karnataka Recruitment 2022 |ಪಂಚಾಯತ್ ರಾಜ್ ಇಲಾಖೆ ಬೃಹತ್ ನೇಮಕಾತಿ ಅಧಿಸೂಚನೆ 2022

State Government

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್(RDPR) ಇಲಾಖೆಯಿಂದ ಬೃಹತ್ ನೇಮಕಾತಿ ಅಧಿಸೂಚನೆ 2022

 

RDPR Karnataka Recruitment 2022: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ ಬೃಹತ್ ನೇಮಕಾತಿ ಅಧಿಸೂಚನೆ ಪ್ರಕಟವಾಗಿದೆ.​ ಈ ನೇಮಕಾತಿ ಅಧಿಸೂಚನೆ ಪ್ರಕಾರ ಒಟ್ಟು 6406 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಪಿಯುಸಿ ಪೂರ್ಣಗೊಳಿಸಿರುವವರು ಅರ್ಜಿ ಸಲ್ಲಿಸಬಹುದಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್​ಲೈನ್​​ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.


ಈ ನೇಮಕಾತಿಗೆ ಸಂಬಂಧಪಟ್ಟ ವಿದ್ಯಾರ್ಹತೆ,ವಯೋಮಿತಿ,ವೇತನಶ್ರೇಣಿ ಮುಂತಾದ ಮಾಹಿತಿ ಕೆಳಗೆ ವಿವರಿಸಲಾಗಿದೆ.

1)RDPR ಸಂಸ್ಥೆ: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್​ ರಾಜ್​ ಇಲಾಖೆ

2)RDPR ಹುದ್ದೆಯ ಹೆಸರು: ಗ್ರಾಮ ಪಂಚಾಯತ್ ಕಾರ್ಯದರ್ಶಿ ಮತ್ತು ಗ್ರಾಮೀಣಾಭಿವೃದ್ಧಿ ಸಹಾಯಕ, ಸೆಕೆಂಡ್ ಡಿವಿಶನ್ ಅಕೌಂಟ್ಸ್​ ಅಸಿಸ್ಟೆಂಟ್

3)RDPR ಹುದ್ದೆಗಳ ಮಾಹಿತಿ:

  • ಗ್ರಾಮ ಪಂಚಾಯತ್ ಕಾರ್ಯದರ್ಶಿ ಮತ್ತು ಗ್ರಾಮೀಣಾಭಿವೃದ್ಧಿ ಸಹಾಯಕ- 3827
  • ಸೆಕೆಂಡ್ ಡಿವಿಶನ್ ಅಕೌಂಟ್ಸ್​ ಅಸಿಸ್ಟೆಂಟ್ – 2579
  • ಒಟ್ಟು ಹುದ್ದೆಗಳು: 6406

 

4)RDPR ವಿದ್ಯಾರ್ಹತೆ:

ಪಂಚಾಯತ್​ ರಾಜ್​ ಇಲಾಖೆ ನೇಮಕಾತಿ ಅಧಿಸೂಚನೆಯ ಪ್ರಕಾರ, ಗ್ರಾಮ ಪಂಚಾಯತ್ ಕಾರ್ಯದರ್ಶಿ ಮತ್ತು ಗ್ರಾಮೀಣಾಭಿವೃದ್ಧಿ ಸಹಾಯಕ, ಸೆಕೆಂಡ್ ಡಿವಿಶನ್ ಅಕೌಂಟ್ಸ್​ ಅಸಿಸ್ಟೆಂಟ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಬೋರ್ಡ್​​ನಿಂದ ಕಡ್ಡಾಯವಾಗಿ ಪಿಯುಸಿ ಪೂರ್ಣಗೊಳಿಸಿರಬೇಕು.


5)RDPR ವಯೋಮಿತಿ:

ಪಂಚಾಯತ್ ರಾಜ್ ಕರ್ನಾಟಕ ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಯ ಗರಿಷ್ಠ ವಯಸ್ಸು RDPR ಕರ್ನಾಟಕ ನೇಮಕಾತಿ ಮಾನದಂಡಗಳ ಪ್ರಕಾರ ಇರಬೇಕು.

6)RDPR ವಯೋಮಿತಿ ಸಡಿಲಿಕೆ:

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಕರ್ನಾಟಕ ನಿಯಮಾವಳಿ ಪ್ರಕಾರ ವರ್ಗಾನುಸಾರ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.

7)RDPR ವೇತನ ಶ್ರೇಣಿ: ಮಾಸಿಕ ರೂ.21,400/- ರಿಂದ ರೂ.42,000/-


8)RDPR ಅರ್ಜಿ ಶುಲ್ಕ:

ಪಂಚಾಯತ್​ ರಾಜ್​ ಇಲಾಖೆ ನೇಮಕಾತಿ ಅಧಿಸೂಚನೆಯ ಪ್ರಕಾರ, ಗ್ರಾಮ ಪಂಚಾಯತ್ ಕಾರ್ಯದರ್ಶಿ ಮತ್ತು ಗ್ರಾಮೀಣಾಭಿವೃದ್ಧಿ ಸಹಾಯಕ, ಸೆಕೆಂಡ್ ಡಿವಿಶನ್ ಅಕೌಂಟ್ಸ್​ ಅಸಿಸ್ಟೆಂಟ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಯಾವುದೇ ಅರ್ಜಿ ಶುಲ್ಕ ಪಾವತಿಸುವಂತಿಲ್ಲ.

9)RDPR ಆಯ್ಕೆ ಪ್ರಕ್ರಿಯೆ: ಲಿಖಿತ ಪರೀಕ್ಷೆ ಮತ್ತು ಸಂದರ್ಶನ

ಶೀಘ್ರದಲ್ಲೆ ಅರ್ಜಿ ಸಲ್ಲಿಸಲು ಚಾಲನೆ ನೀಡಲಾಗುತ್ತದೆ

OFFICIAL WEBSITE
DOWNLOAD NOTIFICATION PDF


Leave a Reply

Your email address will not be published. Required fields are marked *