ಸಿಬ್ಬಂದಿ ನೇಮಕಾತಿ ಆಯೋಗ ಸ್ಟೆನೋಗ್ರಾಫರ್ ಗ್ರೇಡ್ ಸಿ ಮತ್ತು ಗ್ರೇಡ್ ಡಿ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಿದೆ. ಆಸಕ್ತರು ಹುದ್ದೆಗಳ ಬಗೆಗೆ ಸಂಪೂರ್ಣ ಮಾಹಿತಿಯನ್ನು ಪಡೆದುಕೊಂಡು ಅರ್ಜಿ ಸಲ್ಲಿಸಬಹುದು.
ಸಿಬ್ಬಂದಿ ನೇಮಕಾತಿ ಆಯೋಗ ವಿದ್ಯಾರ್ಹತೆ: ಎಸ್‌ಎಸ್‌ಸಿ ನೇಮಕಾತಿಯ ಈ ಹುದ್ದೆಗಳಿಗೆ 12ನೇ ತರಗತಿ/ಇಂಟರ್ ಮೀಡಿಯೇಟ್/ಹೆಚ್‌ಎಸ್ಸಿ ಅಥವಾ ಅದಕ್ಕೆ ಸಮನಾದ ವಿದ್ಯಾರ್ಹತೆಯನ್ನು ಮಾನ್ಯತೆ ಪಡೆದ ಬೋರ್ಡ್/ಸಂಸ್ಥೆ/ವಿಶ್ವವಿದ್ಯಾಲಯದಿಂದ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಹಾಕಬಹುದು.
ಸಿಬ್ಬಂದಿ ನೇಮಕಾತಿ ಆಯೋಗ ವಯೋಮಿತಿ: ಎಸ್‌ಎಸ್‌ಸಿ ನೇಮಕಾತಿಯ ಗ್ರೇಡ್ ಸಿ ಮತ್ತು ಡಿ ಹುದ್ದೆಗಳಿಗೆ ಆಗಸ್ಟ್ 1,2020ರ ಅನ್ವಯ ಕನಿಷ್ಟ 18 ರಿಂದ ಗ್ರೇಡ್ ಸಿ ಹುದ್ದೆಗಳಿಗೆ ಗರಿಷ್ಟ 30 ವರ್ಷ ಮತ್ತು ಗ್ರೇಡ್ ಡಿ ಹುದ್ದೆಗಳಿಗೆ ಗರಿಷ್ಟ 27 ವರ್ಷ ವಯೋಮಿತಿಯೊಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಓಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಪ.ಜಾ/ಪ.ಪಂ ಅಭ್ಯರ್ಥಿಗಳಿಗೆ 5 ವರ್ಷ ಮತ್ತು ಅಂಗವಿಕಲ ಅಭ್ಯರ್ಥಿಗಳಿಗೆ 10 ವರ್ಷಗಳ ವಯೋಮಿತಿ ಸಡಿಲಿಕೆ ನೀಡಲಾಗಿದೆ.
ಸಿಬ್ಬಂದಿ ನೇಮಕಾತಿ ಆಯೋಗ ವೇತನ: ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಸಿಬ್ಬಂದಿ ನೇಮಕಾತಿ ಆಯೋಗದ ನೇಮಕಾತಿ ನಿಯಮಾನುಸಾರ ವೇತನವನ್ನು ನೀಡಲಾಗುವುದು.
ಸಿಬ್ಬಂದಿ ನೇಮಕಾತಿ ಆಯೋಗ ಆಯ್ಕೆ ಪ್ರಕ್ರಿಯೆ: ಗ್ರೇಡ್ ಸಿ ಮತ್ತು ಡಿ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಕಂಪ್ಯೂಟರ್ ಆಧಾರಿತ ಪರೀಕ್ಷೆ ಮತ್ತು ಮಾರ್ಚ್ 29,2021 ಮತ್ತು ಮಾರ್ಚ್ 31,2021ರಂದು ನಡೆಯುವ ಕೌಶಲ್ಯ ಪರೀಕ್ಷೆಯ ಮೂಲಕ ಆಯ್ಕೆ ಮಾಡಲಾಗುವುದು.
ಸಿಬ್ಬಂದಿ ನೇಮಕಾತಿ ಆಯೋಗ ಅರ್ಜಿ ಶುಲ್ಕ: ಅರ್ಜಿದಾರರು 100/-ರೂ ಅರ್ಜಿ ಶುಲ್ಕವನ್ನು ಆನ್‌ಲೈನ್ ಮೂಲಕ ನವೆಂಬರ್ 6,2020ರೊಳಗೆ ಮತ್ತು ಆಫ್‌ಲೈನ್ ಮೂಲಕ ನವೆಂಬರ್ 8,2020ರೊಳಗೆ ಪಾವತಿಸಬೇಕಿರುತ್ತದೆ. ಪ.ಜಾತಿ/ಪ.ಪಂಗಡ/ಅಂಗವಿಕಲ ಮತ್ತು ಮಾಜಿ ಸೈನಿಕ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ಇರುತ್ತದೆ
ಸಿಬ್ಬಂದಿ ನೇಮಕಾತಿ ಆಯೋಗ ಅರ್ಜಿ ಸಲ್ಲಿಕೆ: ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ನಲ್ಲಿ ಅಧಿಕೃತ ವೆಬ್‌ಸೈಟ್ https://ssc.nic.in/ ಗೆ ಭೇಟಿ ನೀಡಿ. ಅಲ್ಲಿ ಕೇಳಲಾಗಿರುವ ಮಾಹಿತಿಯನ್ನು ಭರ್ತಿ ಮಾಡುವ ಮೂಲಕ ನವೆಂಬರ್ 4,2020ರ ರಾತ್ರಿ 11:30ರೊಳಗೆ ಅರ್ಜಿಯನ್ನು ಸಲ್ಲಿಸತಕ್ಕದ್ದು. ಅಭ್ಯರ್ಥಿಗಳು ನೇಮಕಾತಿ ಬಗೆಗಿನ ಅಧಿಸೂಚನೆಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಸಿಬ್ಬಂದಿ ನೇಮಕಾತಿ ಆಯೋಗ ಅರ್ಜಿ ಸಲ್ಲಿಕೆಗೆ ಕೊನೆ ದಿನ :ನವೆಂಬರ್ 4 ,2020