ಪರೀಕ್ಷೆಗಳಿಗೆ ಓದುವುದನ್ನು ಧೀರ್ಘಕಾಲ ನೆನಪಿಡುವುದು ಹೇಗೆ ? ಬನ್ನಿ ತಿಳಿಯೋಣ

Uncategorized

ಸ್ಪರ್ಧಾತ್ಮಕ ಪರೀಕ್ಷೆ ಗಳಿಗೆ ಪಠ್ಯಕ್ರಮದ ಪ್ರಕಾರ ಓದಿದರೂ ಕಲಿತದ್ದು ಪೂರ್ಣವಾಗಿ ನೆನಪಿನಲ್ಲಿ ಉಳಿಯುವುದಿಲ್ಲ. ಪ್ರಮುಖ ಮಾಹಿತಿಗಳನ್ನೇ ಮರೆತುಬಿಟ್ಟಿರುತ್ತೇವೆ. ಓದಿದ್ದೆಲ್ಲಾ ನೆನಪಿನಲ್ಲಿ ಉಳಿಯಬೇಕೆಂದರೆ ಅದಕ್ಕೆ ಮತ್ತೊಂದು ಶೈಲಿಯ ಅಧ್ಯಯನವನ್ನೇ ರೂಢಿಸಿಕೊಂಡು.. ಸ್ಪರ್ಧಾತ್ಮಕ ಪರೀಕ್ಷೆ ಹಾಗೂ ಯಾವುದೇ ಪರೀಕ್ಷೆಗಳಿಗೆ ಪಠ್ಯಕ್ರಮದ ಪ್ರಕಾರ ಓದಿದರೂ ಕಲಿತದ್ದು ಪೂರ್ಣವಾಗಿ ನೆನಪಿನಲ್ಲಿ ಉಳಿಯುವುದಿಲ್ಲ. ಪ್ರಮುಖ ಮಾಹಿತಿಗಳನ್ನೇ ಮರೆತುಬಿಟ್ಟಿರುತ್ತೇವೆ. ಓದಿದ್ದೆಲ್ಲಾ ನೆನಪಿನಲ್ಲಿ ಉಳಿಯಬೇಕೆಂದರೆ ಅದಕ್ಕೆ ಮತ್ತೊಂದು ಶೈಲಿಯ ಅಧ್ಯಯನವನ್ನೇ ರೂಢಿಸಿಕೊಂಡು, ದಿನನಿತ್ಯ ಫಾಲೋ ಮಾಡಬೇಕು.

ಹಾಗಾದರೆ ಹೇಗೆ ನೆನಪಿಡಬೇಕು ಗೊತ್ತಾ?:

ಈ ಸಲಹೆಗಳು ಒಂದು ರೀತಿ ಯುನಿವರ್ಸಲ್ ಫಾರ್ಮುಲಾಗಳಾಗಿದ್ದು, ಓದಿದ್ದನ್ನು ವೇಗವಾಗಿ ನೆನಪು ಮಾಡಿಕೊಳ್ಳಲು ಸಹಕಾರಿ. ಈ ವಿಧಾನಗಳನ್ನು ನೀಡಿದವರು ಜರ್ಮನಿ ಮನೋಶಾಸ್ತ್ರಜ್ಞರಾದ Hermann Ebbinghaus ರವರು. ಆ ವಿಧಾನಗಳನ್ನು ಈ ಕೆಳಗೆ ನೀಡಲಾಗಿದ್ದು ಸ್ಪರ್ಧಾತ್ಮಕ ಪರೀಕ್ಷೆಗೆ ಆಗಲಿ, ಶೈಕ್ಷಣಿಕ ವಾರ್ಷಿಕ ಪರೀಕ್ಷೆಗಳಿಗೆ ಆಗಲಿ ಬಳಸಬಹುದು.

ಮರೆವಿಗೆ ಪ್ರಮುಖ ಕಾರಣಗಳೆಂದರೆ ಮೆದುಳು ಅನಗತ್ಯ ಮಾಹಿತಿಗಳಿಂದ ಓವರ್‌ಲೋಡ್‌ ಆಗುವುದನ್ನು ತಡೆಯುತ್ತದೆ. ಆದ್ದರಿಂದ ಎಲ್ಲಾ ಹೊಸ ಮಾಹಿತಿಗಳು ಶಾರ್ಟ್‌ ಟರ್ಮ್‌ ಮೆಮೊರಿಯಲ್ಲಿ ಸ್ಟೋರ್ ಆಗುತ್ತವೆಯೇ ಹೊರತು, ದೀರ್ಘ ಮೆಮೊರಿಯಲ್ಲಲ್ಲ. ಓದಿದ, ತಿಳಿದ ಮಾಹಿತಿಯನ್ನು ಮತ್ತೊಮ್ಮೆ ಓದದೇ ಇದ್ದರೇ ಅಥವಾ ಬಳಸದಿದ್ದಲ್ಲಿ, ಮಾಹಿತಿಗಳು ಬಹುಬೇಗ ಮರೆತುಹೋಗುತ್ತವೆ.

ಓದಿದ್ದು ದೀರ್ಘಕಾಲ ನೆನಪಿನಲ್ಲಿ ಉಳಿಸಿಕೊಳ್ಳುವುದು ಹೇಗೆ?

ಓದಿದ್ದು ದೀರ್ಘಕಾಲ ನೆನಪಿನಲ್ಲಿರಬೇಕು ಎಂದರೆ ಲಾಂಗ್ ಟರ್ಮ್‌ ಮೆಮೊರಿಯಲ್ಲಿ ಶೇಖರಣೆ ಮಾಡಬೇಕು. ನೆನಪು ಮಾಡಿಕೊಳ್ಳಲು ಮೆದುಳಿಗೆ ಹೆಚ್ಚು ಕೆಲಸಕೊಡುವುದು ತುಂಬಾ ಕಷ್ಟದ ಕೆಲಸವೇನಲ್ಲ. ದೀರ್ಘಕಾಲ ವಿಷಯಗಳನ್ನು ಮರೆಯಬಾರದು ಎಂದರೆ, ಕೆಲವು ದಿನಗಳು ಮತ್ತು ಅಥವಾ ಒಂದು ವಾರಗಟ್ಟಲೇ ಅದೇ ಮಾಹಿತಿಗಳನ್ನು ನೆನಪುಮಾಡಿಕೊಳ್ಳುವ ಮತ್ತು ಪುನಃ ಪುನಃ ಓದುವ ಚಟುವಟಿಕೆಗಳನ್ನು ಮಾಡಬೇಕು.

ಇತರೆ ಹಲವು ಮೆಮೊರೈಜಿಂಗ್ ಟಿಪ್ಸ್‌ಗಳು ಈ ಕೆಳಗಿನಂತಿವೆ. ಸುಮ್ಮನೆ ಓದುವ ಬದಲು ಓದಿದ್ದನ್ನು ಅರ್ಥಮಾಡಿಕೊಳ್ಳುತ್ತಾ ಓದಿ. ಅರ್ಥಮಾಡಿಕೊಂಡ ಮಾಹಿತಿಗಳು 9 ಪಟ್ಟು ವೇಗವಾಗಿ ನೆನಪಿಗೆ ಬರುತ್ತವೆ. ಹಾಗೆ ಅಗತ್ಯ ಮಾಹಿತಿಗಳನ್ನು ಮಾತ್ರ ಹೆಚ್ಚು ಓದಿ ಮತ್ತು ಕಲಿಯಿರಿ. ಯಾವುದಕ್ಕೆ ಎಷ್ಟು ಪ್ರಾಧಾನ್ಯತೆ ನೀಡಬೇಕೋ ಅಷ್ಟು ಮಾತ್ರ ನೀಡಿರಿ.

ಕಷ್ಟ ಬೇಡ ಇಷ್ಟ ಪಟ್ಟು ಓದಿರಿ

ಒಂದು ಟಾಫಿಕ್‌ನಿಂದ ಮತ್ತೊಂದು ಟಾಫಿಕ್‌ಗೆ ಲಿಂಕ್‌ ಮಾಡಿ ಗಮನಿಸಿ. ಹೀಗೆ ಮಾಡುವುದರಿಂದ ವಿಷಯಗಳು ಬಹುಬೇಗ ನೆನಪಿಗೆ ಬರುತ್ತವೆ. ಉದಾಹರಣೆಗೆ ಒಂದು ಸ್ಥಳವನ್ನು ತೆಗೆದುಕೊಂಡಾಗ, ಅದರ ಸುತ್ತಮುತ್ತಲ ಬಗ್ಗೆ ಯೋಚಿಸಿದರೆ, ಮತ್ತಷ್ಟು ಮಾಹಿತಿಗಳು ಸಿಗುತ್ತದೆ. ಹಾಗೆಯೇ ನೀವು ಓದಿದ ಮಾಹಿತಿಗೂ ಸಹ. ಕಾಲಾನುಕ್ರಮವಾಗಿ ನೀವು ಯಾವುದಾದರೂ ಮಾಹಿತಿಗಳನ್ನು ನೆನಪು ಮಾಡಿಕೊಳ್ಳಬೇಕು ಎಂದಲ್ಲಿ, ಸಣ್ಣ ವಿಷಯಗಳನ್ನು ಒಂದು ಕಥೆಯನ್ನಾಗಿ ರೂಪಿಸಿ.

ಹೀಗೆ ಮಾಡಿದಾಗ ವಿಷಯಗಳನ್ನು ನೆನಪು ಮಾಡಿಕೊಳ್ಳುವುದು ತುಂಬಾ ಸುಲಭ. – ಕಲಿಯುತ್ತಿರುವ ಮಾಹಿತಿಯನ್ನು ರೆಕಾರ್ಡ್‌ ಮಾಡಿ. ಸ್ವಲ್ಪ ಸಮಯಗಳ ಕಾಲ ಕೇಳಿರಿ. ಈ ವಿಧಾನವು ಬಹಳ ಜನರಿಗೆ ವರ್ಕ್ ಆಗುತ್ತದೆ. ಹಾಗೆ ಕಲಿಕೆ ವೇಳೆ ಉತ್ತಮ ಆಂಗಿಕ ಭಾಷೆ (Body Language) ಬಳಸಿ.

ಇದರಿಂದ ಮೆಮೊರಿ ಪವರ್‌ ವೃದ್ಧಿಗೆ ಸಹಾಯವಾಗುತ್ತದೆ. – ಅಧ್ಯಯನ ಸಾಮಾಗ್ರಿ ಆಯ್ಕೆಯಲ್ಲಿ ಉತ್ತಮವಾದುದ್ದನ್ನು ಆರಿಸಿಕೊಳ್ಳಿ. ತೀರ ಹಳೆಯ ಪುಸ್ತಕಗಳು ಮತ್ತು ವಿಧಾನಗಳನ್ನು ಅನುಸರಿಸದಿರಿ. ತಲೆಯೊಳಗೆ ಹೋಗದ ವಿಧಾನದಲ್ಲಿ ಯಾವುದನ್ನೇ ಕಲಿಯಬಾರದು. ಸುಲಭವಾಗಿ ಅರ್ಥವಾಗುವ ವಿಧಾನದಲ್ಲಿ ಅಧ್ಯಯನ ನಡೆಸಿ. ಉತ್ತಮ ಪುಸ್ತಕಗಳು, ನೆನಪು ಮಾಡಿಕೊಳ್ಳಲು ಸರಳ ಮಾದರಿಯಲ್ಲಿ ನೀಡಲಾದ ಮೆಟೀರಿಯಲ್‌ಗಳನ್ನು ಆಯ್ಕೆ ಮಾಡಿಕೊಂಡು ಓದಿರಿ.

Leave a Reply

Your email address will not be published. Required fields are marked *