ಯಾವ ಪದವಿ/ ವಿಷಯಗಳು ಐಎಎಸ್‌ ಪರೀಕ್ಷೆಗೆ ಉತ್ತಮ ಆಯ್ಕೆಗಳು ಗೊತ್ತೇ?

National



ಯಾವ ಪದವಿ/ ವಿಷಯಗಳು ಐಎಎಸ್‌ ಪರೀಕ್ಷೆಗೆ ಉತ್ತಮ ಆಯ್ಕೆಗಳು ಗೊತ್ತೇ?

ಯುಪಿಎಸ್‌ಸಿ ಸಿವಿಲ್ ಸರ್ವೀಸೆಸ್‌ ಪರೀಕ್ಷೆಗಳಿಗೆ, ಯಾವುದೇ ಪದವಿ ಅಥವಾ ಬಿಎ ಡಿಗ್ರಿಯಲ್ಲಿ ಓದಿದ ವಿಷಯಗಳು ಸಹಾಯವಾಗುತ್ತದೆ ಎಂಬುದು ತೀರ ಒಳ್ಳೆಯ ನಿರ್ಧಾರವಲ್ಲ. ಆದರೆ ಪರೀಕ್ಷೆ ತೆಗೆದುಕೊಂಡ ನಂತರ ಎಷ್ಟು ಪರಿಣಾಮಕಾರಿಯಾಗಿ ಓದುತ್ತೇನೆ ಎಂಬುದು ಮುಖ್ಯ. ಕಾರಣ ಇಂದು ಇಂಜಿನಿಯರಿಂಗ್, ಡಾಕ್ಟರ್, ಎಂಎಸ್ಸಿ, ಎಂಟೆಕ್ ಓದಿದವರು ನಂತರದಲ್ಲಿ ಕಲಾ ವಿಷಯಗಳನ್ನೇ ನಾಗರೀಕ ಸೇವೆಗಳ ಮುಖ್ಯ ಪರೀಕ್ಷೆಗೆ ಐಚ್ಛಿಕ ವಿಷಯವಾಗಿ ತೆಗೆದುಕೊಂಡು ಯಶಸ್ಸು ಕಂಡವರಿದ್ದಾರೆ. ಆದಾಗ್ಯೂ ಯಾವ ಡಿಗ್ರಿ ಅಥವಾ ಬಿಎ ಸಬ್ಜೆಕ್ಟ್‌ ಐಎಎಸ್‌, ಇತರೆ ಸಿಎಸ್‌ಇ ಪರೀಕ್ಷೆಗಳಿಗೆ ಅನುಕೂಲವಾಗಲಿದೆ ಎಂದು ಕೇಳುವುದಾದರೆ ಕೆಳಗಿನ ವಿವರಗಳನ್ನು ಓದಿರಿ.


 ಐಎಎಸ್‌ ಪರೀಕ್ಷೆಗೆ ಅಧ್ಯಯನ  ಕೇಂದ್ರ ಸೇರಬೇಕಾ ? 

  • ಬಿಎ, ಬಿಕಾಂ, ಬಿಎಸ್ಸಿ, ಬಿಬಿಎ, ಬಿಸಿಎ ಹೀಗೆ ಇನ್ನೂ ಹಲವು ಪದವಿಗಳ ಪೈಕಿ ಬಿಎ ಪದವಿಯಲ್ಲಿನ ಹಲವು ವಿಷಯಗಳನ್ನು ಅಧ್ಯಯನ ಮಾಡುವುದು ಕೇಂದ್ರ ಸೇವೆಗಳ ಪರೀಕ್ಷೆಗೆ ಅನುಕೂಲವಾಗಲಿದೆ. 
  • ಆದರೆ ಪದವಿ ಮುಗಿದ ನಂತರವು ಐಎಎಸ್‌ ಪರೀಕ್ಷೆಯ ಮುಖ್ಯ ಪರೀಕ್ಷೆಯಲ್ಲಿ ಯಾವ ವಿಷಯವನ್ನು ಐಚ್ಛಿಕವಾಗಿ ಆಯ್ಕೆ ಮಾಡಿಕೊಳ್ಳುತ್ತೀರೋ ಅದನ್ನು ಪುನಃ ದೀರ್ಘವಾಗಿ ಅಧ್ಯಯನ ಮಾಡಬೇಕಾಗುತ್ತದೆ. 
  • ಇನ್ನೂ ಒಂದು ವಿಷಯವನ್ನು ನೆನಪಿನಲ್ಲಿ ಇಡಲೇಬೇಕು. ಐಎಎಸ್‌ ಮುಖ್ಯ ಪರೀಕ್ಷೆಗೆ ಐಚ್ಛಿಕ ವಿಷಯ ಓದುವುದು ಪದವಿಯಲ್ಲಿ ಪೊಲಿಟಿಕಲ್ ಸೈನ್ಸ್‌ ಓದಿದ ರೀತಿ ಅಲ್ಲ.

 

ಐಎಎಸ್‌ ಪರೀಕ್ಷೆಗೆ  ಹೇಗೆ ಓದಬೇಕು ? 

ಐಎಎಸ್ ಪರೀಕ್ಷೆಗೆ ಸಹಾಯವಾಗುವ ಬಿಎ ಡಿಗ್ರಿ ಓದಲೇಬೇಕು ಎಂದುಕೊಂಡಲ್ಲಿ ಯುಪಿಎಸ್‌ಸಿ ಸಿಎಸ್‌ಇ ಜೆನೆರಲ್ ಸ್ಟಡೀಸ್ ಪೇಪರ್‌ಗೂ ಅನುಕೂಲವಾಗುವ ಇತಿಹಾಸ, ಪೊಲಿಟಿಕಲ್ ಸೈನ್ಸ್‌, ಜಿಯೋಗ್ರಫಿ, ಅರ್ಥಶಾಸ್ತ್ರ, ಪತ್ರಿಕೋದ್ಯಮ, ಸಾರ್ವಜನಿಕ ಆಡಳಿತ, ಸಮಾಜಶಾಸ್ತ್ರ ಮತ್ತು ಇತರೆ ವಿಷಯಗಳನ್ನು ಒಳಗೊಂಡಿರುವ ಬಿಎ ಪದವಿ ಓದಿದರೆ ಅನುಕೂಲವಾಗುತ್ತದೆ ಎನ್ನುತ್ತಾರೆ ಯುಪಿಎಸ್‌ಸಿ ಸಿಎಸ್‌ಇ ಟಾಪರ್‌ಗಳು. ಅಥವಾ ನೀವು ಸಿವಿಲ್ ಸರ್ವೀಸ್ ಪರೀಕ್ಷೆಯ ಮುಖ್ಯ ಪರೀಕ್ಷೆಯಲ್ಲಿ ಐಚ್ಛಿಕ ವಿಷಯವಾಗಿ ಯಾವುದನ್ನು ತೆಗೆದುಕೊಳ್ಳಬೇಕು ಎಂದುಕೊಂಡಿರುತ್ತೀರೋ ಆ ಸಬ್ಜೆಕ್ಟ್‌ ಇರುವ ಕಾಂಬಿನೇಷನ್‌ ಕೋರ್ಸ್‌ ಅನ್ನು ಓದಿರಿ.



ದೂರಶಿಕ್ಷಣ ,ಕರೆಸ್ಪಾಡೆನ್ಸ್‌ನಲ್ಲಿ ಪದವಿ ಓದಿದವರು ಐಎಎಸ್ ಪರೀಕ್ಷೆ ಬರೆಯಬಹುದೇ?

  • ಯುಪಿಎಸ್‌ಸಿ ಸಿವಿಲ್ ಸೇವೆ ಪರೀಕ್ಷೆ ತೆಗೆದುಕೊಳ್ಳಲು ಯಾವುದೇ ಪದವಿಯನ್ನು ಪಾಸ್‌ ಮಾಡಿರಬೇಕು. ಆ ಪದವಿಯನ್ನು ದೂರಶಿಕ್ಷಣ / ಕರೆಸ್ಪಾಡೆನ್ಸ್‌/ ರೆಗ್ಯುಲರ್ ಮೂಲಕ ಭಾರತ ಸರ್ಕಾರದಿಂದ ಮಾನ್ಯತೆ ಪಡೆದ ಯಾವುದಾದರೂ ವಿಶ್ವವಿದ್ಯಾಲಯದಿಂದ ಪಡೆದಿರಬೇಕು.
  • ಕೇಂದ್ರ ಲೋಕಸೇವಾ ಆಯೋಗವು ಒಟ್ಟು 24 ಸೇವೆಗಳಿಗೆ ನಾಗರಿಕ ಸೇವೆಗಳ ಪರೀಕ್ಷೆಯನ್ನು ನಡೆಸುತ್ತದೆ. ಈ ಪರೀಕ್ಷೆಯು ಮೂರು ಹಂತಗಳಾದ ಪೂರ್ವಭಾವಿ ಪರೀಕ್ಷೆ, ಮುಖ್ಯ ಪರೀಕ್ಷೆ, ಸಂದರ್ಶನ ಹಂತಗಳನ್ನು ಒಳಗೊಂಡಿರುತ್ತದೆ.

 

IAS ಪ್ರಶ್ನೆ ಪತ್ರಿಕೆಗಳ ಸಂಗ್ರಹ 2009-2020:

Indian Administrative Service ಪರೀಕ್ಷೆಗೆ ತಯಾರಿ ನಡೆಸುತ್ತಿರುವವರಿಗೆ ಅನುಕೂಲವಾಗಲೆಂದು 2009 ರಿಂದ 2018 ರ ವರೆಗಿನ IAS ಮುಖ್ಯ ಪರೀಕ್ಷೆ ಯ ಕನ್ನಡ ಭಾಷಾ ಪತ್ರಿಕೆಗಳನ್ನು ಹಾಗೂ ಪಠ್ಯ ಕ್ರಮ ವನ್ನು ನೀಡಲಾಗಿದೆ

CLICK HERE TO DOWNLOAD IAS PREVIOUS YEAR PAPERS




Leave a Reply

Your email address will not be published. Required fields are marked *